ಮಂಗಳೂರು: ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಮುಳ್ಯ ಅಟ್ಲೂರ್ ಮತ್ತು ಪ್ರಣವ್ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮುಳ್ಯ 6ನೇ ವಾರ್ಡ್‍ನ ಬಿಪಿಎಲ್ ಕಾರ್ಡ್‍ದಾರರಿಗೆ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಫುಡ್ ಕಿಟ್ ವಿತರಣೆ ಮಾಡಿದರು.
Advertisement
ಮುಳ್ಯ ಭಜನಾ ಮಂದಿರ ಆವರಣದಲ್ಲಿ ಫುಡ್ ಕಿಟ್ ವಿತರಣೆಗೆ ಅಂಗಾರ ಅವರು ಚಾಲನೆ ನೀಡಿದರು. ಸಚಿವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆದ ನಂತರ ಸಾಂಕೇತಿಕವಾಗಿ 10 ಜನರಿಗೆ ಕಿಟ್ ನೀಡಲಾಯಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಸದಸ್ಯೆ ರತ್ನಾವತಿ, ದೇವಪ್ಪಗೌಡ ಮುಳ್ಯ, ರುದ್ರಪ್ಪ ಗೌಡ, ಮನ್ಮಥ ಗೌಡ ಮುಳ್ಯ, ತಾರನಾಥ ಅತ್ಯಡ್ಕ, ಸುಳ್ಯ ಸಿ ಎ ಬ್ಯಾಂಕ್ ನಿರ್ದೇಶಕ ವಾಸುದೇವ ನಾಯಕ್, ಗುರುದತ್ ನಾಯಕ್, ಕಿಟ್ಟಣ್ಣ ರೈ ಮೇನಾಲ, ಪ್ರಭೋದ್ ಶೆಟ್ಟಿ ಮೇನಾಲ, ಸುನೀಲ್ ರೈ ಮೇನಾಲ, ಊರವರು ಭಾಗವಸಿದ್ದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ
Advertisement
Advertisement
ಸುಳ್ಯ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಸ್ವಾಗತಿಸಿ, ನಾಗರಾಜ್ ಮುಳ್ಯ ವಂದಿಸಿದರು. ವಾರ್ಡ್ ವ್ಯಾಪ್ತಿಯ 200 ಕುಟುಂಬಗಳಿಗೆ ತಲಾ ಸಾವಿರದ ನೂರು ರೂ. ಮೌಲ್ಯದ ಆಹಾರದ ಕಿಟ್‍ನ್ನು ವಿತರಿಸಲಾಯಿತು.
Advertisement