– ರಾಜ್ಯದಲ್ಲಿ 328 ಮಂದಿ, ಬೆಂಗ್ಳೂರಲ್ಲಿ 139 ಮಹಾಮಾರಿಗೆ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಕಂಡುಬಂದಿಲ್ಲ. ಇಂದು 49,058 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ರಾಜ್ಯದ ಜನರಲ್ಲಿ ಆತಂಕ ಹುಟ್ಟಿಸಿದೆ.
ಇಂದು ಬರೋಬ್ಬರಿ 49,058 ಮಂದಿಗೆ ಸೋಂಕು ತಗುಲಿದ್ದು, 328 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 23,706 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 139 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು 18,943 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 328 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 17,212ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.83 ಮತ್ತು ಮರಣ ಪ್ರಮಾಣ ಶೇ.0.66ರಷ್ಟಿದೆ. ರಾಜ್ಯದಲ್ಲಿ 45,17,075 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಇಂದು ಒಟ್ಟು 1,64,441 ಸ್ಯಾಂಪಲ್ (ರಾಪಿಡ್ 11071+ಆರ್ ಟಿಪಿಸಿಆರ್ 1,53,370) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು ಬಿಟ್ಟರೆ ಮೈಸೂರು ಮತ್ತು ತುಮಕೂರಿನಲ್ಲಿ ಇಂದು ಕೂಡ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 665, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1,301, ಮೈಸೂರು 2,531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1,526, ಉತ್ತರ ಕನ್ನಡ 734, ವಿಜಯಪುರ 662 ಮತ್ತು ಯಾದಗಿರಿಯಲ್ಲಿ 721 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.