ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

Public TV
1 Min Read
sudeep 6

ಬಿಗ್‍ಬಾಸ್ ಮನೆಯಲ್ಲಿ ಕೆಲವು ನಿಯಮಗಳಿಗೆ ಅದರ ವಿರುದ್ಧವಾಗಿ ಯಾರು ನಡೆದುಕೊಂಡರೂ ಸುದೀಪ್ ಆ ಕುರಿತಾಗಿ ವಾರಂತ್ಯದಲ್ಲಿ ಮಾತನಾಡಿ ಕೆಲವು ಪರಿಹಾರ, ಮತ್ತು ಬುದ್ಧಿವಾದವನ್ನು ಹೇಳುವ ಕೆಲಸವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ವಿರುದ್ಧವಾಗಿ ಚಕ್ರವರ್ತಿ ತಿರುಗಿ ಬಿದ್ದಿದ್ದಾರೆ. ತಪ್ಪು ಮಾಡಿ ನನ್ನದಲ್ಲ ಎನ್ನುವ ರೀತಿಯಲ್ಲಿ ಸುದೀಪ್ ಬಳಿ ಚಕ್ರವರ್ತಿ ಮಾತನಾಡಿದ್ದಾರೆ.

bigg boss Chakravarthy Chandrachud

 

ಬಿಗ್‍ಬಾಸ್ ಮನೆಯಲ್ಲಿ ಪದೇಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಸುದೀಪ್ ಸ್ತ್ರೀ ಪೀಡಕ ಎಂಬಂತೆ ಬಿಂಬಿಸಿದ್ದಾರೆ. ನಾನು ಟಾರ್ಗೆಟ್ ಆಗುತ್ತಿದ್ದೇನೆ ಎಂದು ಬ್ರೇಕ್ ಸಂದರ್ಭದಲ್ಲಿ ಚಕ್ರವರ್ತಿ ಸ್ಪರ್ಧಿಗಳ ಜೊತೆ ಅಭಿಪ್ರಾಯ ಹಂಚಿಕೊಂಡರು. ಪ್ರತಿ ವಾರವೂ ನನಗೊಂದು ಎಪಿಸೋಡ್ ಮೀಸಲಿಡುತ್ತಿದ್ದೀರಿ. ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ. ಅಂತೂ ಈಗ ನಾಲ್ಕು ಸಾಲು ಒಳ್ಳೆಯದನ್ನು ಹೇಳಿದ್ದೀರಿ. ಸಾಧು-ಸಂತರ ಮಧ್ಯೆ ನಾನು ಕ್ರಿಮಿನಲ್ ಆಗಿದ್ದೇನೆ. ನಿಮ್ಮ ಮೇಲೆ ನನಗೆ ಬೇಸರವಿದೆ. ನಾನು ಆಡುವ ಆಟ, ಕವನಗಳನ್ನು ನೀವು ಹೊಗಳುವುದೇ ಇಲ್ಲ. ಅಪರೂಪಕ್ಕೆ ನನ್ನನ್ನು ಹೊಗಳುತ್ತೀರಿ ಎಂದು ಚಕ್ರವರ್ತಿ ದೂರಿದರು.

ಚಕ್ರವರ್ತಿ ಮಾತಿಗೆ ಸುದೀಪ್, ನೀವು ಹೇಳಿರೋದನ್ನೇ, ಮಾಡಿದ್ದನ್ನೇ ನಾನು ಹೇಳಿದ್ದೀನಿ ಅಂತ ಸಖತ್ ಖಡಕ್ ಆಗಿ ಉತ್ತರ ಕೊಟ್ಟರು. ನಂದೇನಾದರೂ ಇದೆಯಾ ಒಳ್ಳೆಯದನ್ನೂ ಹೇಳಿದ್ದೀನಿ. ನಾನು ನಿಮ್ಮ ಜ್ಞಾನ, ತಿಳುವಳಿಕೆ ಬಗ್ಗೆ ನನಗೆ ಗೌರವವಿದೆ, ಆ ವಿಚಾರದಲ್ಲಿ ನಾನು ನಿಮ್ಮ ಅಭಿಮಾನಿ. ಇಷ್ಟು ಸೀಸನ್‍ಗಳಲ್ಲಿ ನಾನು ಯಾರನ್ನೂ ಅಷ್ಟಾಗಿ ಹೊಗಳಿಲ್ಲ. ನಿಮ್ಮನ್ನು ಸಾಕಷ್ಟು ಬಾರಿ ಹೊಗಳಿದ್ದೇನೆ. ಅದನ್ನು ಸಾಬೀತುಪಡಿಸಲು ಕ್ಲಿಪ್ಪಿಂಗ್ ತೋರಿಸಬೇಕಾ? ಈ ಮನೆಯಲ್ಲಿ ಎಷ್ಟು ಜನಕ್ಕೆ ಇದನ್ನು ಹೇಳಿದ್ದೇನೆ. ನಿಮ್ಮಲ್ಲಿ ಒಳ್ಳೆತನ ಇದೆ. ಈ ವಾರ ಕೋಪ ಕಂಟ್ರೋಲ್ ಮಾಡಿಕೊಂಡ್ರಿ ಅದನ್ನು ಹೇಳ್ತಾ ಇದ್ದೀನಿ. ನೀವು ಕೊಟ್ಟಿರೋ ಬೇಜಾರನ್ನು ಬೇಜಾರಿಂದಲೇ ಹೇಳದೇ ತುಪ್ಪ ಹಚ್ಚಿ ಹೇಳಲಾ? ನಿಮ್ಮ ವೇದಿಕೆಯಿಂದ ನಾಲ್ಕು ಜನ ಕಲಿಯಲಿ ಅನ್ನೋದು ನನ್ನ ಅರ್ಥ ಎಂದು ಸುದೀಪ್ ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *