– ಮುಷ್ಯಗಳನ್ನು ರಕ್ಷಿಸಲು ಹರಸಾಹಸಪಟ್ಟ ಸಿಬ್ಬಂದಿ
– ಮರಗಳಿಂದ ದಡದವರೆಗೂ ಹಗ್ಗ ಕಟ್ಟಿ ರಕ್ಷಣೆ
ದಾವಣಗೆರೆ: ಸುತ್ತಲೂ ಪ್ರವಾಹವಿದ್ದು, ಮರಗಳ ಮೇಲೆಯೇ ಮುಷ್ಯಗಳು ಸಿಲುಕಿವೆ. ಇನ್ನೇನು ಮಾಡುವುದಪ್ಪ ಎಂದು ಮುಷ್ಯಗಳು ಯೋಚಿಸುತ್ತಿರುವಾಗಲೇ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.
ಜಿಲ್ಲೆಯ ಹರಿಹರದ ಬಳಿ ಇರುವ ತುಂಗಾಭದ್ರಾ ನದಿ ತಟದಲ್ಲಿ ಮುಷ್ಯಗಳು ಸಿಲುಕಿದ್ದು, ಇವುಗಳನ್ನು ಹೊರ ತರಲು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ. ನದಿ ನೀರು ಏಕಾಏಕಿ ಬಂದ ಕಾರಣ ಮುಷ್ಯಗಳು ಮರದಲ್ಲೇ ಸಿಲುಕಿವೆ. ಬೆಳಗ್ಗೆಯಿಂದಲೇ ಮುಷ್ಯಗಳನ್ನು ರಕ್ಷಿಸುವ ಕಾರ್ಯ ನಡೆಸುತ್ತಿದ್ದು, ಜನರು ಜಾಸ್ತಿ ಇರುವ ಕಾರಣ ಭಯಪಟ್ಟು ಮುಷ್ಯಗಳು ಮರದಿಂದ ಕೆಳಗೆ ಬಂದಿಲ್ಲ. ಹೀಗಾಗಿ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಮುಷ್ಯಗಳು ಮರಗಳಿಂದ ಕೆಳಗಿಳಿಯದ ಕಾರಣ ಅಗ್ನಿಶಾಮಕ ಸಿಬ್ಬಂದಿ ಮರದಿಂದ ದಡದ ವರೆಗೂ ಹಗ್ಗ ಕಟ್ಟಿದ್ದಾರೆ. ನಂತರ ಮುಷ್ಯಗಳನ್ನು ಬೆದರಿಸಿ ದಡಕ್ಕೆ ಓಡಿಸಿದ್ದಾರೆ. ಒಟ್ಟಿನಲ್ಲಿ ಹೆರಸಾಹಸಪಟ್ಟು ಪೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ.