ಮುಂಬೈ: ಅಪಹರಣಕ್ಕೊಳಗಾಗಿದ್ದ ಜಾರ್ಖಂಡ್‍ನ ಸಮುದ್ರ ನೌಕಾಪಡೆಯ ವ್ಯಕ್ತಿಯೊರ್ವ ಬೆಂಕಿಹಚ್ಚಿಕೊಂಡು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಸೂರಜ್‍ಕುಮಾರ್ ಮಿಟಲೇಶ್ ದುಬೆ(27) ಮೃತ ವ್ಯಕ್ತಿ. ಇತ್ತೀಚೆಗಷ್ಟೇ ಷೇರುಮಾರುಕಟ್ಟೆಯಲ್ಲಿನ ನಷ್ಟದಿಂದ ಖಿನ್ನತೆಗೆ ಒಳಗಾಗಿದ್ದರು. ಈ ಮಧ್ಯೆ ಅವರು ಅಪಹರಣಕ್ಕೆ ಒಳಗಾಗಿದ್ದು, ಫೆಬ್ರವರಿ 5ರ ಮುಂಜಾನೆ ಮುಂಬೈನ ಪಾಲ್ಘರ್ ಜಿಲ್ಲೆಯ ಬಳಿ ಸೂರಜ್‍ಕುಮಾರ್ ಮಿಟಲೇಶ್ ದುಬೆ ದೇಹ ಸುಟ್ಟ ಗಾಯಗಳಿಂದ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಜನವರಿ 30ರಂದು ಚೈನ್ನೈ ವಿಮಾನ ನಿಲ್ದಾಣದಲ್ಲಿ ಮೂವರು ಆರೋಪಿಗಳು ಸೂರಜ್‍ಕುಮಾರ್‍ಗೆ ಬಂದೂಕಿನಿಂದ ಬೆದರಿಸಿ ಅಪಹರಿಸಿ ಪಾಲ್ಘರ್‍ಗೆ ಕರೆದೊಯ್ದಿದ್ದಾರೆ. ಆದರೆ ಅಪಹರಣದಿಂದ ಯಾವುದೇ ಹಣ ದೊರೆಯುವುದಿಲ್ಲ ಎಂದು ತಿಳಿದ ಆರೋಪಿಗಳು ಬೆಂಕಿ ಹಚ್ಚಿ ಕೊಂದಿರಬಹುದು. ಅಲ್ಲದೆ ಸೂರಜ್‍ಕುಮಾರ್ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿ ಸಾಕಷ್ಟು ಸಾಲ ಮಾಡಿದ್ದರು. ಇನ್ನೂ ಈ ವಿಚಾರವನ್ನು ಅವರ ಮನೆಯವರಿಂದ ಮುಚ್ಚಿಟ್ಟಿದ್ದರು. ಚೆನ್ನೈನ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಿ ವೆಲ್ಲೂರಿನತ್ತಾ ಪ್ರಯಾಣ ಬೆಳೆಸಿದ್ದಾರೆ. ಫೆಬ್ರವರಿ 5ರಂದು ಬೆಳಿಗ್ಗೆ 5.30ರ ಸುಮಾರಿಗೆ ತಲಸರಿಯಲ್ಲಿರುವ ಪೆಟ್ರೋಲ್ ಬಂಕ್‍ನಿಂದ 2 ಕ್ಯಾನ್ ಡೀಸೆಲ್ ತೆಗೆದುಕೊಂಡು ಹೋಗುತ್ತಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಇದನೆಲ್ಲಾ ಗಮನಿಸುತ್ತಿದ್ದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಹುಟ್ಟುತ್ತಿದ್ದು, ಪ್ರಕರಣ ಸಂಬಂಧಿಸಿದಂತೆ ಸದ್ಯ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.