ಕೇಪ್‍ಟೌನ್: ಸೌತ್ ಆಫ್ರಿಕಾದ ಮಾಜಿ ಆಟಗಾರ ಮತ್ತು ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
ಎಬಿ ಡಿವಿಲಿಯರ್ಸ್ ದಂಪತಿಗೆ ಇದೇ ತಿಂಗಳು 11ರಂದು ಹೆಣ್ಣು ಮಗುವಿನ ಜನನವಾಗಿದ್ದು, ಈ ವಿಚಾರವನ್ನು ಎಬಿಡಿ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ರೀವಿಲ್ ಮಾಡಿದ್ದಾರೆ. ಈಗಾಗಲೇ ವಿಲಿಯರ್ಸ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಈಗ ಹೆಣ್ಣು ಮಗು ಜನಿಸುವ ಮೂಲಕ ಮೂರನೇ ಮಗುವಿಗೆ ಎಬಿಡಿ ವೆಲ್‍ಕಮ್ ಹೇಳಿದ್ದಾರೆ.
View this post on Instagram
ಈ ವಿಚಾರವಾಗಿ ಪತ್ನಿ ಮತ್ತು ಮಗುವಿನ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ವಿಲಿಯರ್ಸ್, ನವೆಂಬರ್ 11 ರಂದು ನಾವು ಸುಂದರವಾದ ಹೆಣ್ಣು ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಯೆಂಟೆ ಡಿವಿಲಿಯರ್ಸ್, ಅಶೀವಾದದೊಂದಿಗೆ ನೀನು ನಮ್ಮ ಮನೆಗೆ ಪರ್ಫೆಕ್ಟ್ ಅಡಿಷನ್. ನೀನು ಹುಟ್ಟಿದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಮಗುವಿನ ಹೆಸರನ್ನು ಯೆಂಟೆ ಡಿವಿಲಿಯರ್ಸ್ ಎಂದು ತಿಳಿಸಿದ್ದಾರೆ.
View this post on Instagram
ಪ್ರತಿ ಬಾರಿ ಐಪಿಎಲ್ ನಡೆದಾಗ ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಕುಟುಂಬ ಸಮೇತ ಮೈದಾನಕ್ಕೆ ಬಂದು ಆರ್‌ಸಿಬಿ ತಂಡಕ್ಕೆ ಚೀಯರ್ ಮಾಡುತ್ತಿದ್ದರು. ಈ ಬಾರಿ ಡೇನಿಯಲ್ ತುಂಬು ಗರ್ಭಿಣಿಯಾದ ಕಾರಣ ಯುಎಇಗೆ ಬಂದಿರಲ್ಲ. ಈ ಹಿಂದೆ ಡೇನಿಯಲ್ ಹಾಕಿದ್ದ ಗರ್ಭಿಣಿಯ ಫೋಟೋವೊಂದಕ್ಕೆ ಕಮೆಂಟ್ ಮಾಡಿದ್ದ ಅನುಷ್ಕಾ ಶರ್ಮಾ ಒಳ್ಳೆಯ ಸುದ್ದಿ ನಿಮಗೆ ಶುಭಾಶಯ ಎಬಿಡಿ ಮತ್ತು ಡೇನಿಯಲ್ ಎಂದು ಕಮೆಂಟ್ ಮಾಡಿದ್ದರು.
2007ರಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಎಬಿಡಿ ಮತ್ತು ಡೇನಿಯಲ್, 2013 ಮಾಚ್ 30ರಂದು ಮದುವೆಯಾಗಿದ್ದರು. ಇದಾದ ನಂತರ 2015ರಲ್ಲಿ ಎಬಿಡಿ ದಂಪತಿಗೆ ಮೊದಲ ಗಂಡು ಮಗು ಜನಿಸಿತ್ತು. ನಂತರ 2017ರಲ್ಲಿ ಎರಡನೇ ಗಂಡು ಮಗು ಜನಿಸಿತ್ತು. ಈಗ 2020ರಲ್ಲಿ ಹೆಣ್ಣು ಮಗು ಜನಿಸಿದೆ. ಐಪಿಎಲ್-2020ಯಲ್ಲಿ 15 ಪಂದ್ಯಗಳನ್ನಾಡಿ ಎಬಿಡಿ ಐದು ಅರ್ಧಶತಕದ ನೆರವಿನಿಂದ 454 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ.