ಸುಂಟಿಕೊಪ್ಪ ಸುಲಿಗೆ ಪ್ರಕರಣದಲ್ಲಿ 3 ಆರೋಪಿಗಳು ಅಂದರ್- 5.2 ಲಕ್ಷ ಹಣ, ಕಾರು, ಬೈಕ್ ವಶ

Public TV
1 Min Read
MDK ROBBERY CASE

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಗುಂಡುಕುಟ್ಟಿ ಎಸ್ಟೇಟ್ ಸಮೀಪ ನಡೆಸಿದ್ದ ಸುಲಿಗೆ ಪ್ರಕರಣ ಮೂವರು ಆರೋಪಗಳನ್ನು ಬಂಧಿಸಿವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ತಿಳಿಸಿದರು.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಣಗಾಲ್ ನಿವಾಸಿ ಟಿ.ವಿ.ಹರೀಶ್ (57), ಸುಂಟಿಕೊಪ್ಪದ ವಿಜಯನಗರ ನಿವಾಸಿ ಕುಮರೇಶ್ (42) ಹಾಗೆಯೇ ಸುಲಿಗೆಯ ಮಾಸ್ಟರ್ ಮೈಂಡ್ ಇದಕ್ಕೂ ಮೊದಲು ಎಸ್ಟೇಟ್‍ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ ಇಗ್ಗೋಡ್ಲು ಗ್ರಾಮದ ಜಗ್ಗರಂಡ ಕಾವೇರಪ್ಪ (56) ಆರೋಪಗಳನ್ನು ಬಂಧಿಸಿ, ಅವರಿಂದ 5.2 ಲಕ್ಷ ಹಣ ಹಾಗೂ ಕಾರು, ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

MDK ROBBERY CASE a

ದರೋಡೆಗೂ ಮೊದಲೇ ಪೂರ್ವ ನಿಯೋಜಿತ ಸಂಚು ರೂಪಿಸಿದ್ದ ಖದೀಮರು ರೈಟರ್ ವಿಜಯ್ ಕುಮಾರ್ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿದ್ದರು. 2014 ರವರೆಗೆ ಜೈಲಿನಲ್ಲೇ ಇದ್ದು ಬಿಡುಗಡೆಯಾಗಿದ್ದ ಈ ಕೃತ್ಯದ ಎ(1) ಆರೋಪಿ ಹರೀಶ್ 2004 ರಲ್ಲಿ ಸೋಮವಾರಪೇಟೆಯಲ್ಲಿ ಬಂದೂಕು ಕಳವು ಪ್ರಕರಣ, ಸುಂಟಿಕೊಪ್ಪದಲ್ಲಿ ಟ್ಯಾಕ್ಸಿ ಡ್ರೈವರ್ ಒಬ್ಬರನ್ನು ಕೊಲೆ ಆರೋಪ, ಹಾಗೆಯೇ ಸೆಂಟ್ರಲ್ ಬ್ಯಾಂಕ್ ದರೋಡೆ ಸೇರಿದಂತೆ ಕುಶಾಲನಗರದ ಜೋಸ್ಕೊ ಜ್ಯುವೆಲರಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊರ್ವ ಆರೋಪಿ ಕುಮಾರೇಶ್ ವಿರುದ್ಧವೂ ಹೆಬ್ಬಾಲೆಯಲ್ಲಿ ನಡೆದಿದ್ದ ಕೊಲೆ ಸುಫಾರಿ, ಬಿಜಾಪುರದಲ್ಲಿ ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿರು.

ಏನಿದು ಪ್ರಕರಣ: ಮೇ 5 ರಂದು ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಮಾಲೀಕರಾದ ಕರ್ನಲ್ ಕುಮಾರ್ ತೋಟದ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ರೈಟರ್ ವಿಜಯ್ ಕುಮಾರ್ ಅವರಿಗೆ ಚೆಕ್ಕುಗಳನ್ನು ನೀಡಿ ಕಳುಹಿಸಿದ್ದರು. ಅದರಂತೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗುಂಡುಕುಟ್ಟಿ ಎಸ್ಟೇಟ್ ಸಮೀಪ ಅಡ್ಡಗಟ್ಟಿದ ಖದೀಮರು ವಿಜಯ್ ಕುಮಾರ್‍ಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *