– 50:50 ಸೂತ್ರ ಜಾರಿಗೂ ಬಿಬಿಎಂಪಿ ಪ್ಲಾನ್
ಬೆಂಗಳೂರು: ಸೀಲ್ ಡೌನ್, ರೆಡ್ ಟೇಪ್, ರೋಡ್ ಬ್ಲಾಕ್ ಆಯ್ತು ಬೆಂಗಳೂರಿನಲ್ಲಿ ಇದೀಗ ಕಲರ್ ಶೇಡ್ಗೆ ಪ್ಲಯಾನ್ ಮಾಡಲಾಗುತ್ತಿದೆ. ಕೊರೊನಾ ಕಂಟ್ರೋಲ್ಗೆ ಬಿಬಿಎಂಪಿಯ ಹೊಸ ಐಡಿಯಾವೊಂದರ ಚಿಂತನೆ ನಡೆಸುತ್ತಿದೆ. ಹೌದು. ಕಲರ್ ಝೋನ್ ಮೂಲಕ ಸೋಂಕು ನಿಯಂತ್ರಣಕ್ಕೆ ದೆಹಲಿ ಮಾದರಿಯನ್ನು ಇಲ್ಲೂ ತರುವ ಸಾಧ್ಯೆತಗಳಿವೆ.
Advertisement
ಏನಿದು ದೆಹಲಿ ಮಾಡೆಲ್..?
ಸತತ 2 ದಿನ ಶೇ.0.5ಕ್ಕಿಂತ ಕಡಿಮೆ ಅಥವಾ ವಾರದಲ್ಲಿ 1500 ಪ್ರಕರಣ ದಾಖಲಾದರೆ, 500ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್ ತುಂಬಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅಂದರೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ದಿನ ಬಿಟ್ಟು ದಿನ ಅಂಗಡಿಗಳಿಗೆ ಅನುಮತಿ ನೀಡಲಾಗುತ್ತದೆ. ಮೆಟ್ರೋ, ಬಸ್ ಸೇವೆ ಶೇ.50ರಷ್ಟು ಕಾರ್ಯಾಚರಣೆ ನಡೆಯಲಿದ್ದು, ನೈಟ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆಗಳಿವೆ.
Advertisement
Advertisement
ಪಿಂಕ್ ಅಲರ್ಟ್: ಶೇ.1ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹೆಚ್ಚಿರುವುದು. 1 ವಾರ 3,500ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದ್ರೆ ಅಥವಾ 700 ಆಕ್ಸಿಜನ್ ತುಂಬಿದರೆ ಪಿಂಕ್ ಅಲರ್ಟ್ ಘೋಷಣೆ ಮಾಡುವುದು. ವೀಕೆಂಡ್ ಕರ್ಫ್ಯೂ, ಬಾರ್ಗಳು ಕ್ಲೋಸ್ ಹಾಗೂ ಶೇ.33ರಷ್ಟು ಮೆಟ್ರೋ, ಬಸ್ ಸಂಚಾರದಲ್ಲಿ ಪ್ರಯಾಣಕ್ಕೆ ಅವಕಾಶ ನೀಡುವುದು. ಇದನ್ನೂ ಓದಿ: ಜನರ ನಿರ್ಲಕ್ಷ್ಯ, ಬೆಂಗ್ಳೂರಿಗೆ ಮತ್ತೆ ಲಾಕ್ಡೌನ್ ಫಿಕ್ಸ್ – ಆಗಸ್ಟ್ 15ರ ನಂತರ ಟಫ್ ರೂಲ್ಸ್?
Advertisement
ಆರೆಂಜ್ ಅಲರ್ಟ್: ಸತತ 2 ದಿನ ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ದಾಖಲಾದರೆ, ವಾರದಲ್ಲಿ 9 ಸಾವಿರ ಪ್ರಕರಣ ದಾಖಲು ಹಾಗೂ ವಾರದಲ್ಲಿ 1 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಭರ್ತಿಯಾದರೆ ಆರೆಂಜ್ ಅಲರ್ಟ್ ಘೊಷಣೆ ಮಾಡುವುದು. ಒಟ್ಟಿನಲ್ಲಿ ಆರೆಂಜ್ ಅಲರ್ಟ್ ಜಾರಿ ಅಂದರೆ ಭಾಗಶಃ ಲಾಕ್ ಡೌನ್ ಎಂದರ್ಥ ಆಗಿರುತ್ತದೆ.
ರೆಡ್ ಅಲರ್ಟ್: ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾಗಬೇಕು. ವಾರದಲ್ಲಿ 16 ಸಾವಿರ ಪ್ರಕರಣ ದಾಖಲಾಗಬೇಕು. 3 ಸಾವಿರ ಆಕ್ಸಿಜನ್ ಬೆಡ್ ಭರ್ತಿಯಾದರೆ ಸಂಪೂರ್ಣ ಲಾಕ್ ಡೌನ್, ಕರ್ಫ್ಯೂ ಜಾರಿ ಮಾಡಲಾಗುವುದು.