ಸೀಲ್‍ಡೌನ್‍ಗೂ ಕ್ಯಾರೆ ಎನ್ನದ ಶಿವಾಜಿನಗರ ಜನ- ಬೇಕಾಬಿಟ್ಟಿ ಸಂಚಾರ

Public TV
1 Min Read
shivaji nagar sealdown

– ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಸಂಚರಿಸಬಹುದು
– ವ್ಯಾಪಾರ ವಹಿವಾಟು ಜೋರು

ಬೆಂಗಳೂರು: ಸಿಲಿಕಾನ್ ಸಿಟಿಯ ಕೊರೊನಾ ಹಾಟ್‍ಸ್ಪಾಟ್‍ಗಳ ಪೈಕಿ ಒಂದಾಗಿರುವ ಶಿವಾಜಿನಗರದಲ್ಲಿ ಹೆಸರಿಗಷ್ಟೇ ಸೀಲ್‍ಡೌನ್ ಮಾಡಲಾಗಿದ್ದು, ಇಲ್ಲಿಂದ ಎಲ್ಲಿಗೆ ಬೇಕಾದರೂ ತೆರಳಬಹುದಾಗಿದೆ ಎಂಬುದು ಪಬ್ಲಿಕ್ ಟಿವಿಯ ಗ್ರೌಂಡ್ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ.

vlcsnap 2020 05 20 08h10m14s212 e1589942699893

ಯಾರು ಬೇಕಾದರೂ ಶಿವಾಜಿನಗರಕ್ಕೆ ಬರಬಹುದು, ಯಾರು ಬೇಕಾದರೂ ಇಲ್ಲಿಂದ ಹೊರಗೆ ಹೋಗಬಹುದಾಗಿದೆ. ಅಲ್ಲದೆ ಗುಜರಿ ಅಂಗಡಿಗಳನ್ನು ಕದ್ದು ಮುಚ್ಚಿ ತೆರೆಯಲಾಗಿದ್ದು, ಇಡ್ಲಿ ವ್ಯಾಪಾರವೂ ಜೋರಾಗಿ ಸಾಗಿದೆ. ಕೊರೊನಾ ಭಯ ಹಾಗೂ ಸರ್ಕಾರದ ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಜನರು ಓಡಾಡುತ್ತಿದ್ದಾರೆ. ಇಡ್ಲಿ ಮಾರಾಟ, ಮಳಿಗೆಗಳು ತೆರೆದಿವೆ. ಅಲ್ಲದೆ ರಸ್ತೆಯಲ್ಲೇ ಕೂತು ಕಾಫಿ ಕುಡಿಯುವುದು, ದ್ವಿಚಕ್ರ ವಾಹನ ಎತ್ತಿಕೊಂಡು ಸೀಲ್‍ಡೌನ್ ಮಿತಿ ದಾಟಿ ಬೀದಿ ಬೀದಿ ತಿರುಗುವುದು ಎಗ್ಗಿಲ್ಲದೆ ನಡೆದಿದೆ.

vlcsnap 2020 05 20 08h10m03s99 e1589942758997

ಅಲ್ಲದೆ ಇಲ್ಲಿಯ ಜನರು ಸಹ ಮಾಸ್ಕ್ ಹಾಕುವ ಗೋಜಿಗೆ ಹೋಗಿಲ್ಲ. ಪೊಲೀಸರು, ಆರೋಗ್ಯಾಧಿಕಾರಿಗಳು ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ಹೆಸರಿಗೆ ಮಾತ್ರ ಸೀಲ್‍ಡೌನ್ ಎನ್ನುವಂತಾಗಿದ್ದು, ಇವರು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ ಎನ್ನವಂತೆ ಎಗ್ಗಿಲ್ಲದೆ ತಮ್ಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *