ಮುಂಬೈ: ಸಾಮಾನ್ಯವಾಗಿ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಜಿಮ್‍ನಲ್ಲಿ ವರ್ಕೌಟ್ ಮಾಡುವವರನ್ನು ನಾವು ನೋಡಿರುತ್ತೇವೆ. ಆದರೆ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‍ನಲ್ಲಿ ಪುಷ್-ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಕೊರನಾ ಲಾಕ್‍ಡೌನ್ ವೇಳೆ ಮನೆಯಲ್ಲಿಯೇ ಇದ್ದು, ವ್ಯಾಯಾಮ ಮಾಡದೇ ಸೋಮಾರಿಯಂತೆ ಹಲವಾರು ಮಂದಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಆದರೆ ಆರೋಗ್ಯಕರವಾಗಿದ್ದು, ಫಿಟ್ ಆಗಿ ಕಾಣಬೇಕು ಅಂದರೆ ವ್ಯಾಯಾಮಾ ದೇಹಕ್ಕೆ ಬಹಳ ಮುಖ್ಯ. ಹೀಗಾಗಿ ಬಿಡುವಿದ್ದಾಗಲೆಲ್ಲಾ ಫಿಟ್ನೆಸ್ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದು ಉತ್ತಮ.
Advertisement
View this post on Instagram
Advertisement
ಸದ್ಯ ಪುಣೆ ಮೂಲದ ಡಾ. ಶಾರ್ವರಿ ಇಮಾಮ್ದಾರ್ ಎಂಬವರು ಸೀರೆಯುಟ್ಟು ಬಹಳ ಸಲೀಸಾಗಿ ಪುಷ್ ಅಪ್ಸ್ ಮಾಡಿದ್ದಾರೆ. ಈ ವೀಡಿಯೋ ವ್ಯಾಯಾಮ ಮಾಡಲು ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಿದ್ದು, ಶಾರ್ವರಿ ಇಮಾಮ್ದಾರ್ ರವರು ಕಳೆದ 5 ವರ್ಷದಿಂದ ಪ್ರತಿನಿತ್ಯ ಪುಷ್-ಅಪ್ಸ್ ಹಾಗೂ ಪುಲ್ ಆಪ್ಸ್, ಲಿಫ್ಟ್, ಭಾರವಾದ ಡಂಬಲ್ಸ್‌ಗಳನ್ನು ಎತ್ತುವ ಮೂಲಕ ಫಿಟ್ನೆಸ್ ಮೈಂಟೈನ್ ಮಾಡುತ್ತಿದ್ದಾರೆ.
Advertisement
View this post on Instagram
ಸದ್ಯ ಈ ವೀಡಿಯೋವನ್ನು ಶಾರ್ವರಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಸೀರೆತೊಟ್ಟು ನಡೆಯುವುದಕ್ಕೆ ಕಷ್ಟ, ಸೀರೆ ಅನ್ ಕಂಫರ್ಟ್‍ಟೇಬಲ್ ಎನ್ನುವ ಇಂದಿನ ಮಹಿಳೆಯರ ಮಧ್ಯೆ, ಸಂಪ್ರದಾಯಿಕ ಉಡುಗೆ ತೊಟ್ಟು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಈ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಮಹಿಳೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಒಟ್ಟಾರೆ ಪ್ರೀತಿ, ಛಲ, ಆಸಕ್ತಿ, ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ಎಂದೇ ಹೇಳಬಹುದು. ಇದನ್ನೂ ಓದಿ: ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ