ಭುವನೇಶ್ವರ: ಲಾಕ್‍ಡೌನ್ ವೇಳೆ ಸೀರಿಯಲ್ ನೋಡಿ ಒಡಿಶಾದ 10 ವರ್ಷದ ಬಾಲಕ ರಾಮಾಯಣ ಪುಸ್ತಕ ಬರೆದಿದ್ದಾರೆ.
ಆಯುಷ್ ಕುಮಾರ್(10) ರಾಮಾಯಣ ಪುಸ್ತಕವನ್ನು ಬರೆದಿದ್ದಾನೆ. ಈತ ರಾಮಾಯಣದ ಸೀರಿಯಲ್‍ಗಳನ್ನು ನೋಡಿ ಒಡಿಯಾ ಭಾಷೆಯಲ್ಲಿ 104 ಪುಟ ಇರುವ ರಾಮಾಯಣವನ್ನು ಬರೆದಿದ್ದಾನೆ.
Advertisement
Advertisement
ಲಾಕ್‍ಡೌನ್ ಸಮಯದಲ್ಲಿ ಮರುಪ್ರಸಾರವಾಗುವ ರಾಮಾಯಣವನ್ನು ನೋಡಲು ನನ್ನ ಅಂಕಲ್ ಹೇಳಿದ್ದರು. ನೋಡುವುದು ಮಾತ್ರವಲ್ಲ ಅದನ್ನು ಬರೆಯಲು ಪ್ರಯತ್ನಿಸು ಎಂದು ಹೇಳಿದ್ದರು. ಪ್ರತಿದಿನ ನೋಡುತ್ತಿದ್ದೆ. ಪ್ರತಿನಿತ್ಯ ನಾನು ನೋಡಿದ ಎಪಿಸೋಡ್‍ಗಳನ್ನು ಬರೆಯತೊಡಗಿದ್ದೆ. ರಾಮಾಯಣವನ್ನು ಬರೆದು ಮುಗಿಸಲು ಸರಿ ಸುಮಾರು 2 ತಿಂಗಳ ಸಮಯವನ್ನು ತೆಗೆದುಕೊಂಡಿತ್ತು ಎಂದು ಆಯುಷ್ ಹೇಳಿದ್ದಾನೆ.
Advertisement
Advertisement
ರಾಮನ 14 ವರ್ಷಗಳ ಕಾಲ ವನವಾಸ, ಸೀತೆಯ ಅಪಹರಣ ಹೀಗೆ ಅನೇಕ ಪ್ರಮುಖ ಘಟನೆಯನ್ನು ರಾಮಾಯಣದ ಪುಸ್ತಕದಲ್ಲಿ ಬರೆದಿದ್ದೇನೆ. ರಾಮ ಅಯೋಧ್ಯೆಗೆ ಹಿಂದಿರುಗುವಾಗ ಆತನಿಗೆ ಸಿಕ್ಕಿರುವ ಸ್ವಾಗತವನ್ನು ತುಂಬಾ ಸರಳವಾಗಿ ಚೆನ್ನಾಗಿ ವಿವರಿಸಿ ಬರೆದಿದ್ದೇನೆ ಎಂದು ಹೇಳಿದ್ದಾನೆ.