ಧಾರವಾಡ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಇದೆ, ದೆಹಲಿಗೆ ಹೋದರೆ ಅವರ ಕುಟುಂಬದ ಹೆಸರುಗಳೇ ಇವೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ್ದ ಶಾಸಕ ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸರ್ಕಾರದ ಹಣದಿಂದ ಯೋಜನೆಗಳನ್ನು ಮಾಡುತ್ತೇವೆ, ಆದರೆ ದೆಹಲಿಯಲ್ಲಿ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಹೆಸರುಗಳೇ ಇವೆ. ದೇಶದ ತುಂಬ ಅದೇ ಹೆಸರಿವೆ, ಹೀಗಾಗಿ ಸಹಜವಾಗಿಯೇ ಅದರ ಬಗ್ಗೆ ಸಿ.ಟಿ.ರವಿ ಗಮನ ಸೆಳೆದಿದ್ದಾರೆ ಎಂದರು.
Advertisement
Advertisement
ಹಿಂದೆ ಮಾಯಾವತಿ ಪಾರ್ಕ್‍ನಲ್ಲಿ ಪ್ರತಿಮೆ ಮಾಡಲು ಮುಂದಾಗಿದ್ದರು, ಆಗ ದೇಶಾದ್ಯಂತ ಹೋರಾಟವೇ ನಡೆಯಿತು. ದೇಶಾದ್ಯಂತ ಗಾಂಧಿ ಕುಟುಂಬದ ಹೆಸರಿನಲ್ಲಿ ಎಲ್ಲ ಇವೆ, ಪಾರ್ಕ್, ರಸ್ತೆ, ರೈಲ್ವೆ ನಿಲ್ದಾಣಗಳು, ಕ್ರೀಡಾಂಗಣ, ಸರ್ಕಾರ ಯೋಜನೆ, ಆಸ್ಪತ್ರೆ ಎಲ್ಲ ಅವರ ಹೆಸರಿನಲ್ಲಿವೆ. ಕಾಂಗ್ರೆಸ್ ತನ್ನ ಈ ದ್ವಂದ್ವ ನೀತಿ ಬಿಡಬೇಕು, ಸರ್ಕಾರದ ಯೋಜನೆಗಳಿಗೆ ಇವರ ಒಂದೆರಡು ಹೆಸರಿಟ್ಟರೆ ಅಡ್ಡಿ ಇಲ್ಲ, ಎಲ್ಲದ್ದಕ್ಕೂ ಅವರದೇ ಹೆಸರು ಇಡುತ್ತ ಹೋಗುವುದು ತಪ್ಪು ಎಂದು ಬೆಲ್ಲದ ಹೇಳಿದರು.