ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 46,791 ಮಂದಿಗೆ ಸೋಂಕು ಬಂದಿದೆ.
ಕಳೆದ ಮೂರು ತಿಂಗಳಿನಲ್ಲಿ ಅತಿ ಕಡಿಮೆ ಸೋಂಕು ದೃಢಪಟ್ಟದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸೋಮವಾರ ಒಂದೇ ದಿನ 587 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 69,721 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು 75,97,064 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 67,33,329 ಮಂದಿ ಚೇತರಿಕೆಯಾಗಿದ್ದರೆ 7,48,538 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಕೊರೊನಾದಿಂದ 1,15,197 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕ Vs ಭಾರತ
ಅಮೆರಿಕದಲ್ಲಿ ಹೊಸದಾಗಿ 57 ಸಾವಿರ ಪ್ರಕರಣ ದಾಖಲಾಗಿದೆ. ಈ ಮೂಲಕ ದಿನದ ಪ್ರಕರಣದ ಲೆಕ್ಕಾಚಾರದಲ್ಲಿ ಮತ್ತೆ ಅಮೆರಿಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಅಮೆರಿಕದಲ್ಲಿ ಇಲ್ಲಿಯವರೆಗೆ 84,56,653 ಮಂದಿಗೆ ಸೋಂಕು ಬಂದಿದ್ದರೆ ಭಾರತದಲ್ಲಿ 75,97,064 ಮಂದಿಗೆ ಬಂದಿದೆ. ಅಮೆರಿಕದಲ್ಲಿ 27,28,163 ಸಕ್ರಿಯ ಪ್ರಕರಣಗಳಿದ್ದು 11, 22, 992 ಮಂದಿ ಮೃತಪಟ್ಟಿದ್ದಾರೆ.
10 ಲಕ್ಷ ಜನ ಸಂಖ್ಯೆ ಲೆಕ್ಕಾಚಾರ ತೆಗೆದುಕೊಂಡರೆ ಅಮೆರಿಕದಲ್ಲಿ 25,503 ಮಂದಿಗೆ ಸೋಂಕು ಬಂದಿದ್ದರೆ ಭಾರತದಲ್ಲಿ 5,487 ಮಂದಿಗೆ ಸೋಂಕು ಬಂದಿದೆ. ಅಮೆರಿಕದಲ್ಲಿ 679 ಮಂದಿ ಮೃತಪಟ್ಟರೆ, ಭಾರತದಲ್ಲಿ 83 ಮಂದಿ ಸಾವನ್ನಪ್ಪಿದ್ದಾರೆ.