ಬೆಂಗಳೂರು: ದೇಶದಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಇಂಟರ್ನಿಗಳಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಿಂಗಳಿಗೆ ಅಂದಾಜು 40 ಸಾವಿರಕ್ಕೂ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ.
ಸಿಸ್ಕೊ ಇಂಡಿಯಾದಲ್ಲಿ ಇಂಟರ್ನ್‌ಗಳ ಮಾಸಿಕ ವೇತನ 49,324 ರೂ.ಇದ್ದರೆ ಅಮೆಜಾನ್‌ನಲ್ಲಿ 49,008 ರೂ. ಇದೆ ಎಂದು ಕಂಪನಿಗಳ ಉದ್ಯೋಗ, ಸಂಬಳದ ಬಗ್ಗೆ ಅಧ್ಯಯನ ನಡೆಸುತ್ತಿರುವ ಗ್ಲಾಸ್‌ಡೂರ್ ವೆಬ್‌ಸೈಟ್ ತಿಳಿಸಿದೆ.
Advertisement
Advertisement
ಯಾವ ಕಂಪನಿ ಎಷ್ಟು?
ಮೈಕ್ರೋಸಾಫ್ಟ್ 47,798 ರೂ., ಅಡೋಬ್ 47,719 ರೂ., ಗೂಗಲ್ 46,963 ರೂ, ಸ್ಯಾಮ್‌ಸಂಗ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಇಂಡಿಯಾ 42,190 ರೂ. ಸಂಬಳ ನೀಡುತ್ತದೆ.
Advertisement
ಗೋಲ್ಡ್ ಮ್ಯಾನ್ ಸ್ಯಾಕ್ಸ್ 36,873 ರೂ., ಎನ್ವಿಡಿಯಾ 36,840 ರೂ., ಐಬಿಎಂ 34,973 ರೂ., ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ 34,562 ರೂ., ಒರಾಕಲ್ 32,964 ರೂ. ಹಣವನ್ನು ತಿಂಗಳ ಸಂಬಳವಾಗಿ ನೀಡುತ್ತದೆ.
Advertisement
ವರ್ಷವೊಂದಕ್ಕೆ ಭಾರತದಲ್ಲಿ 600 ಮತ್ತು ಅಮೆರಿಕದಲ್ಲಿ 700 ಇಂಟರ್ನ್‌ಗಳನ್ನು ಕಂಪನಿ ನೇಮಕ ಮಾಡಿಕೊಳ್ಳುತ್ತದೆ ಎಂದು ಸಿಸ್ಕೋ ವಕ್ತಾರರು ತಿಳಿಸಿದ್ದಾರೆ. ಇಂಟರ್ನ್‌ಗಳಾಗಿ ಅರೆ ಕಾಲಿಕ ಅವಧಿಗೆ ಸೇರ್ಪಡೆಗೊಂಡರೂ ಮುಂದೆ ಬಹಳಷ್ಟು ಮಂದಿ ನಂತರ ಕಾಯಂ ಉದ್ಯೋಗಿಗಳಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ ಶೇ.70 ಮಂದಿ ಇಂಟರ್ನ್‌ಗಳು ಕಾಯಂ ಉದ್ಯೋಗಿಗಳಾಗಿದ್ದಾರೆ.
ಪ್ರಮುಖ ಬಿ-ಸ್ಕೂಲ್‌ಗಳಿಂದ ಬರುವ 100 ಅಭ್ಯರ್ಥಿಗಳಿಗೆ ವಿಪ್ರೋ ಮಾಸಿಕ 85,000 ರೂ.ಗಳ ಸ್ಟೈಫಂಡ್ ನೀಡುತ್ತದೆ. ಯಾವ ಶೈಕ್ಷಣಿಕ ಸಂಸ್ಥೆಯಲ್ಲಿ ಓದಿದ್ದಾರೆ? ಅವರ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಇಂಟರ್ನಿಗಳ ಸಂಬಳ ನಿರ್ಧಾರವಾಗುತ್ತದೆ.