ಬೆಂಗಳೂರು: ಗಂಧದ ಗುಡಿ ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ಬೆನ್ನಲ್ಲೇ ನಟಿ ಎಸ್ಕೇಪ್ ಆದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಹೌದು. ಮೇಡಂ ಮನೆಯಲ್ಲಿ ಇಲ್ಲಾ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲಾ ಅಂತ ಯಲಹಂಕದಲ್ಲಿರುವ ಮನೆಯ ಸೆಕ್ಯುರಿಟಿ ಗಾರ್ಡ್ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಗಿಣಿ ರಾತ್ರಿಯೇ ಮನೆ ಬಿಟ್ಟು ಬೇರೆ ಕಡೆಗೆ ತೆರಳಿದ್ರಾ..? ಅಥವಾ ಮನೆಯಲ್ಲಿಯೇ ಇದ್ದು ಇಲ್ಲಾ ಅಂತ ಹೇಳಿಸ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ನಟಿ ರಾಗಿಣಿಗೆ ಸ್ನೇಹಿತರ ಮನೆಗೂ ಹೋಗಿರಬಹುದು. ಇಂದಿರಾ ನಗರದಲ್ಲಿರೋ ಸ್ನೇಹಿತರ ಮನೆಗೆ ಹೋಗಿರೋ ಸಾಧ್ಯತೆ. ಇದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗಲು ಸಿಸಿಬಿ ಅಧಿಕಾರಿಗಳು ಬುಲಾವ್ ನೀಡಿದ್ದರು. ಆದರೆ ಇದೀಗ ವಿಚಾರಣೆಗೆ ಹಾಜರಾಗಬೇಕಿರುವ ನಟಿ ರಾಗಿಣಿ ಮನೆ ಬಿಟ್ಟು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಒಟ್ಟಿನಲ್ಲಿ ಇಂದು ವಿಚಾರಣೆಗೆ ಹಾಜರಾಗ್ತಾರಾ ರಾಗಿಣಿ?, ಇಲ್ಲಾ ಕಾರಣ ಕೊಟ್ಟು ದಿನ ಮುಂದೆ ಹಾಕಲು ಪ್ಲಾನ್ ಮಾಡ್ತಿದ್ದಾರಾ ಎಂಬ ಪ್ರಶ್ನೆ ಕೂಡ ಮೂಡಿದೆ. ಇದನ್ನೂ ಓದಿ: ನಟಿ ರಾಗಿಣಿಗೆ ನೋಟಿಸ್ – ಸಿಸಿಬಿಯಿಂದ ಆಪ್ತ ಅರೆಸ್ಟ್