ಬೆಂಗಳೂರು: ನಡು ರಸ್ತೆಯಲ್ಲಿ ಕಾರು ಚಾಲಕರ ಹುಚ್ಚಾಟದಿಂದ ಬೈಕ್ ಸವಾರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೂಡಲಪಾಳ್ಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ನವೆಂಬರ್ 30ರ ರಾತ್ರಿ ನಡೆದ ಘಟನೆಯಲ್ಲಿ ಬೈಕ್ ಸವಾರ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಕರ ಅಪಘಾತದ ದೃಶ್ಯ ಸಮೀಪ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೃಶ್ಯದಲ್ಲಿ ಏನಿದೆ?
ರಾತ್ರಿ 12.30ಕ್ಕೆ ಅಕ್ಷಯ್ ಬುಲೆಟ್ ಬೈಕಿನಲ್ಲಿ ರಸ್ತೆಯಲ್ಲಿ ಅವರ ಪಥದಲ್ಲಿ ಬಂದಿದ್ದಾರೆ. ಈ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಂಡಾ ಸಿವಿಕ್ ಮತ್ತು ಸ್ವಿಫ್ಟ್ ಕಾರಿನ ಚಾಲಕರ ನಡುವೆ ರೇಸ್ ನಡೆಯುತ್ತಿತ್ತು.
ಹನುಮಾನ್ ವೈನ್ಸ್ ಮುಂಭಾಗ ಸ್ವಿಫ್ಟ್ ಕಾರನ್ನು ಓವರ್ ಟೇಕ್ ಮಾಡಿ ವೇಗವಾಗಿ ಬರುತ್ತಿದ್ದ ಹೋಂಡಾ ಕಾರು ಅಕ್ಷಯ್‌ಗೆ ಬೈಕಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಅಕ್ಷಯ್ ಗಾಳಿಯಲ್ಲಿ ಎರಡು ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಬಿದ್ದ ನಂತರ ಕೆಲ ಸೆಕೆಂಡ್‌ನಲ್ಲಿ ಸ್ಥಳಕ್ಕೆ ಜನರು ಬಂದಿದ್ದು ಅಕ್ಷಯ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.