ಬೆಂಗಳೂರು: ರಾಜ್ಯದೆಲ್ಲೆಡೆ ಮಳೆಯ ಅಬ್ಬರ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಸಿಲಿಕಾನ್ ಸಿಟಿಯಲ್ಲೂ ಕೂಡ ಇಂದು ಧಾರಾಕಾರ ಮಳೆ ಸುರಿದಿದೆ.
Advertisement
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಡುವು ನೀಡಿದ್ದ ಮಳೆರಾಯ, ಮಧ್ಯಾಹ್ನದ ನಂತರ ಚುರುಕು ಪಡೆದುಕೊಂಡಿದೆ. ಸಂಜೆ ಹೊತ್ತಿಗೆ ಬೆಂಗಳೂರಿನ ಯಶವಂತಪುರ, ಸದಾಶಿವನಗರ, ರಾಜಾಜಿನಗರ, ಹೆಬ್ಬಾಳ, ಮಲ್ಲೇಶ್ವರಂ ಸೇರಿದಂತೆ ಬಹುತೇಕ ಕಡೆ ಮಳೆಯ ಅಬ್ಬರ ಜೋರಾಗಿತ್ತು. ಇದನ್ನೂ ಓದಿ: ಪ್ರವಾಹದ ನೀರಿನಲ್ಲಿ ವಾಹನ ಪಲ್ಟಿ- ಜಾನುವಾರುಗಳು ಸಾವು
Advertisement
Advertisement
ಭಾನುವಾರದ ರಜೆಯಲ್ಲಿ ಹೊರಬಂದಿದ್ದಂತ ಬೆಂಗಳೂರಿನ ಜನತೆ ಮಳೆಯಿಂದಾಗಿ ಹಲವು ರೀತಿಯ ತೊಂದರೆಗೊಳಗಾದರು. ರೇಸ್‍ಕೋರ್ಸ್ ರೋಡ್, ಸಿಎಂ ಮನೆ, ಬಿಡಿಎ, ಶೇಷಾದ್ರಿಪುರಂ ಸುತ್ತಮುತ್ತ ಸುರಿದ ನಿರಂತರ ಮಳೆಯಿಂದಾಗಿ ಕೆಲಸ ಕಾರ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದ ಕಾರಣ ವಾಹನ ಸವಾರರು ಪರದಾಟ ನಡೆಸಿದರು.
Advertisement