– ರಸ್ತೆಗಳಲ್ಲಿ ಮಂಡಿಯವರೆಗೆ ನೀರು, ಟ್ರಾಫಿಕ್ ಜಾಮ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಇನ್ನೂ ಸುರಿಯುತ್ತಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ಮಂಡಿಯವರೆಗೆ ನೀರು ನಿಂತಿದ್ದು, ಮಳೆ ನೀರಲ್ಲಿ ಆಟೋಗಳು ಸಿಕ್ಕಿಹಾಕಿಕೊಂಡಿವೆ. ಕೆಲ ಆಟೋಗಳು ಕೆಟ್ಟು ನಿಂತಿವೆ. ಇದರಿಂದಾಗಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮನೆ ಸೇರೋಣವೆಂದು ಹೊರಟಿದ್ದ ಜನ ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.
ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಯಶವಂತಪುರ, ಆರ್.ಟಿ.ನಗರ, ಮೇಖ್ರಿ ಸರ್ಕಲ್, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮತ್ತ ಭಾರೀ ಮಳೆಯಾಗಿದೆ. ಗುಡುಗು ಸಹಿತ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಸಿಲಿಕಾನ್ ಸಿಟಿ ಜನ ನಲುಗಿ ಹೋಗಿದ್ದಾರೆ. ಮಳೆ ನಡುವೆಯೂ ದೂರದ ಊರಿಗೆ ತೆರಳಲು ಜನ ಮೆಜೆಸ್ಟಿಕ್ ಗೆ ಬರುತ್ತಿದ್ದು, ಗಾಳಿ, ಮಳೆ ನಡುವೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.
ರಾಜಾಜಿನಗರದಲ್ಲಿ ಮಳೆನೀರಲ್ಲಿ ಆಟೋಗಳು ಸಿಲುಕಿದ್ದು, ರಸ್ತೆಗಳಲ್ಲಿ ಮಂಡಿವರೆಗೆ ನೀರು ತುಂಬಿದೆ. ಕೆಲ ಆಟೋಗಳು ರಸ್ತೆಗಳಲ್ಲೇ ಕೆಟ್ಟು ನಿಂತಿವೆ. ಮಳೆ ಹಿನ್ನೆಲೆ ವಾಹನಸವಾರರು ಪರದಾಡುವಂತಾಗಿದ್ದು, ವೀಕೆಂಡ್ ಕಫ್ರ್ಯೂ ಹಿನ್ನೆಲೆ ಬೇಗನೆ ಮನೆಗೆ ಸೇರಲು ಹೊರಟಿದ್ದವರು ಮಳೆಯಲ್ಲಿ ಸಿಲುಕಿದ್ದಾರೆ. ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಟ್ರಾಫಿಕ್ ಜಾಮ್ ಸಂಭವಿಸಿದೆ. ವರುಣಾರ್ಭಟಕ್ಕೆ ಬೆಂಗಳೂರು ಜನ ತತ್ತರಿಸಿದ್ದಾರೆ.