ಸಿಲಿಕಾನ್ ಸಿಟಿಯಲ್ಲಿ ವರುಣನ ಸಿಂಚನ- ವಾಹನ ಸವಾರರ ಪರದಾಟ

Public TV
1 Min Read
blr bng rain

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ವರುಣನ ಸಿಂಚನವಾಗಿದ್ದು, ಮಧ್ಯಾಹ್ನದ ಮಳೆಗೆ ವಾಹನ ಸವಾರರು ಪರದಾಡುವಂತಾಯಿತು.

vlcsnap 2020 06 13 16h14m07s219

ನಗರದ ಮಲ್ಲೇಶ್ವರ, ಮೆಜೆಸ್ಟಿಕ್, ಶೇಷಾದ್ರಿ ಪುರ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕೆಲವೇ ಹೊತ್ತು ಮಳೆ ಸುರಿದರೂ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಧ್ಯಾಹ್ನದ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು.

ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವಣವಿದ್ದು, ಬಿಸಿಲು ಬಿದ್ದಿಲ್ಲ. ಪ್ರತಿ ದಿನ ಅಲ್ಪ ಪ್ರಮಾಣದಲ್ಲಿ ವರುಣನ ಸಿಂಚನವಾಗುತ್ತಿದೆ. ಇದರಿಂದಾಗಿ ಸಿಟಿ ಪೂರ್ತಿ ಫುಲ್ ಕೂಲ್ ಆಗಿದ್ದು, ಚಳಿ ವಾತಾವರಣ ನಿರ್ಮಾಣವಾಗಿದೆ. ಮೋಡ ಕವಿದ ವಾತಾರಣದಿಂದಾಗಿ ಬಿಸಿಲು ಮಾಯವಾಗಿದ್ದು, ನಗರದ ಜನತೆ ಖುಷಿ ಪಡುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.

vlcsnap 2020 06 13 16h13m48s30

ಬೆಂಗಳೂರಿನಲ್ಲಿ ಶನಿವಾರ ಗರಿಷ್ಟ 28, ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *