ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದೆ.
ನಗರದ ಕೆ.ಆರ್.ಪುರಂ, ಬೈಯಪ್ಪನಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ವಿಧಾನಸೌಧ, ಯಶವಂತಪುರ, ಸದಾಶಿವನಗರ, ಜೆಪಿ ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಳೆಯ ಅಬ್ಬರದ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Advertisement
Heavy rain and Strong winds in bangalore #Bangalore #Bengaluru #BangaloreRains pic.twitter.com/cQyd0fx4DM
— Rahul Singh (@desiprogrammer) May 24, 2020
Advertisement
ಬೆಂಗಳೂರಿನ ಮೈಸೂರು ರಸ್ತೆ, ಯೂನಿವರ್ಸಿಟಿ, ವಿಜಯ ನಗರ ಸುತ್ತಮುತ್ತ ಗಾಳಿ ದೂಳಿನಿಂದ ರಸ್ತೆಗಳು ತುಂಬಿದ್ದವು. ಇದರಿಂದಾಗಿ ಕತ್ತಲೆ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವೆಡೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳು ಗಾಳಿಯ ಅಬ್ಬರಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
Advertisement
ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುಂತಾಗಿದೆ. ಭಾರೀ ಗಾಳಿಯಿಂದಾಗಿ ವಿದ್ಯುತ್ ಕಂಬ, ಮರಗಳು ಧರೆಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Advertisement
After the thunderstorm it rained exactly for five minutes, trees uprooted , electricity poles bent..#Bengaluru #rain pic.twitter.com/z84krvEuDs
— SHARADA (@Sharada_naik) May 24, 2020
ಬಿಸುಲು ಜಾಸ್ತಿಯಾದಾಗ ಮುಂಗಾರು ಮಳೆಯ ರೀತಿ ಇಂದು ಮಳೆಯಾಗಿದೆ. ದೊಡ್ಡ ಮಟ್ಟದ ಮಳೆ ಅಲ್ಲದಿದ್ದರೂ ಆರ್ಭಟ ಜಾಸ್ತಿ ಇರುತ್ತದೆ. ಗಾಳಿ, ಗುಡುಗು, ಸಿಡಿಲು ಹೆಚ್ಚಾಗಿರುತ್ತದೆ. ಹೆಚ್ಚು ಸಮಯ ಮಳೆ ಬರದಿದ್ದರೂ ಕೆಲ ಹೊತ್ತಲ್ಲೇ ಧಾರಾಕಾರ ಮಳೆಯಾಗುತ್ತೆ. ಬೆಂಗಳೂರು ಸುತ್ತಮುತ್ತ ಹೆಚ್ಚಿನ ಮಳೆಯಾಗುತ್ತದೆ. 27ರಿಂದ ರಾಜ್ಯದೆಲ್ಲೆಡೆ ಸತತ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
Sudden and heavy rain in Bengaluru!! Feels like a cyclone with strong winds. #bengalururains #bangalorerains pic.twitter.com/FKqxpHlumW
— Sailesh Bathala (@sailesh5210) May 24, 2020