– ಇಂದು 23 ಜನರಿಗೆ ಕೊರೊನಾ
– ಬೆಂಗ್ಳೂರಿನಲ್ಲಿ ಓರ್ವನಿಂದ 14 ಜನರಿಗೆ ಸೋಂಕು
ಬೆಂಗಳೂರು: ಹಾಸನ, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹೆಮ್ಮಾರಿ ಕೊರೊನಾ ವೈರಸ್‍ಗೆ ತತ್ತರಿಸಿ ಹೋಗಿವೆ. ಈ ಬೆಳವಣಿಗೆಯನ್ನ ನೋಡಿದರೆ ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನ 23 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 14, ಹಾಸನ 3, ಮಂಡ್ಯ, ದಾವಣಗೆರೆ, ಉಡುಪಿ, ಧಾರವಾಡ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ಉಡುಪಿಯಲ್ಲಿ 1 ವರ್ಷದ ಹೆಣ್ಣು ಮಗುವಿಕೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
Advertisement
Advertisement
ಕೊರೊನಾ ಹಾಟ್‍ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಇದೀಗ ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಮಂದಿಗೆ ಪಾಸಿಟಿವ್ ಇರುವುದು ದೃಢವಾಗಿದೆ.
Advertisement
ಶುಕ್ರವಾರ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಜನರಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಶಿವಾಜಿನಗರದಲ್ಲಿ ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 202 ಪ್ರಕರಣ ಪತ್ತೆಯಾಗಿದ್ದು, ಇಂದಿನ 14 ಪ್ರಕರಣ ಸೇರಿ 216ಕ್ಕೆ ಏರಿಕೆಯಾಗಿದೆ. ಈ ಮೂಲಕ ಶಿವಾಜಿನಗರ ಕೊರೊನಾ ಹಬ್ ಆಗಿದೆ.
Advertisement
ಒಂದೇ ಬಿಲ್ಡಿಂಗ್‍ನಲ್ಲಿ ಇದ್ದ 72 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ನಿನ್ನೆ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಪಾಸಿಟಿವ್ ದೃಢಪಟ್ಟಿತ್ತು. ಇಂದು 20 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 14 ಪಾಸಿಟಿವ್ ಬಂದಿದೆ. ಈ 14 ಜನ ಹಾಗೂ ನಿನ್ನೆ ಪಾಸಿಟಿವ್ ಬಂದ 11 ಜನ ಒಂದೇ ಪ್ಲೋರ್ ನಲ್ಲಿ ಇದ್ದರು.
ಸೋಂಕಿತರ ವಿವರ:
1. ರೋಗಿ-1057: ಮಂಡ್ಯದ 40 ವರ್ಷದ ವ್ಯಕ್ತಿ. ಕೋಲಾರ ಮತ್ತು ಬೆಂಗಳೂರು ಪ್ರಯಾಣ ಹಿನ್ನೆಲೆ
2. ರೋಗಿ-1058: ಹಾಸನದ 50 ವರ್ಷದ ವ್ಯಕ್ತಿ. ಮುಂಬೈ ಪ್ರಯಾಣ ಹಿನ್ನೆಲೆ
3. ರೋಗಿ-1059: ಉಡುಪಿಯ 1 ವರ್ಷದ ಹೆಣ್ಣು ಮಗು. ದುಬೈನಿಂದ ವಾಪಸ್ಸಾಗಿರುವ ಹಿನ್ನಲೆ
4. ರೋಗಿ-1060: ಧಾರವಾಡದ 34 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ
5. ರೋಗಿ-1061: ದಾವಣಗೆರೆಯ 65 ವರ್ಷದ ಮಹಿಳೆ. ರೋಗಿ 533 ರ ದ್ವಿತೀಯ ಸಂಪರ್ಕ
6. ರೋಗಿ-1062: ಬಳ್ಳಾರಿಯ 46 ವರ್ಷದ ವ್ಯಕ್ತಿ. ಅಹಮದಾಬಾದ್, ಗುಜರಾತ್ ಪ್ರಯಾಣ ಹಿನ್ನೆಲೆ
7. ರೋಗಿ-1063: ಬಾಗಲಕೋಟೆಯ 33 ವರ್ಷದ ಯುವಕ. ಮುಂಬೈ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
8. ರೋಗಿ-1064; ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
9. ರೋಗಿ-1065: ಬೆಂಗಳೂರಿನ 25 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
10. ರೋಗಿ-1066: ಬೆಂಗಳೂರಿನ 20 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
11.ರೋಗಿ-1067: ಬೆಂಗಳೂರಿನ 50 ವರ್ಷದ ಪುರುಷ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
12.ರೋಗಿ-1068: ಬೆಂಗಳೂರಿನ 20 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
13.ರೋಗಿ-1069: ಬೆಂಗಳೂರಿನ 27 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
14.ರೋಗಿ-1070: ಬೆಂಗಳೂರಿನ 24 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
15.ರೋಗಿ-1071: ಬೆಂಗಳೂರಿನ 23 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
16.ರೋಗಿ-1072: ಬೆಂಗಳೂರಿನ 24 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
17.ರೋಗಿ-1073: ಬೆಂಗಳೂರಿನ 26 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
18.ರೋಗಿ-1074: ಬೆಂಗಳೂರಿನ 33 ವರ್ಷದ ಪುರುಷ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
19.ರೋಗಿ-1075: ಬೆಂಗಳೂರಿನ 17 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
20.ರೋಗಿ-1076: ಬೆಂಗಳೂರಿನ 18 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
21.ರೋಗಿ-1077: ಬೆಂಗಳೂರಿನ 19 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
22.ರೋಗಿ-1078: ಹಾಸನದ 63 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ.
23.ರೋಗಿ-1079: ಹಾಸನದ 21 ವರ್ಷದ ಯುವತಿ. ಮುಂಬೈ ಪ್ರಯಾಣ ಹಿನ್ನೆಲೆ.
Covid19: Mid- Day Bulletin
Total Confirmed Cases: 1079
Deceased: 36
Recovered: 494
New Cases: 23#KarnatakaFightsCorona pic.twitter.com/GMYSmmtFxe
— B Sriramulu (@sriramulubjp) May 16, 2020