– ಒಟ್ಟು 535 ಜನ ಪೊಲೀಸರಿಗೆ ಸೋಂಕು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತೆ 33 ಜನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು 535 ಪೊಲೀಸರಿಗೆ ಸೋಂಕು ಆವರಿಸಿದಂತದಾಗಿದೆ.
ಬೆಂಗಳೂರಿನಲ್ಲಿ ಇಂದು 33 ಜನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿಗೆ ತುತ್ತಾದ ಒಟ್ಟು ಪೊಲೀಸರ ಸಂಖ್ಯೆ 535ಕ್ಕೆ ಏರಿಕೆಯಾಗಿದೆ. ಇದರಲ್ಲಿ 292 ಜನ ಗುಣಮುಖರಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ಇನ್ನೂ 237 ಜನ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬರೋಬ್ಬರಿ 737 ಜನ ಕ್ವಾರಂಟೈನ್‍ನಲ್ಲಿದ್ದು, 19 ಪೊಲೀಸ್ ಠಾಣೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಪೊಲೀಸ್ ಸಿಬ್ಬಂದಿಯಲ್ಲಿ ಸಹ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ನಿಯಂತ್ರಿಸುವುದು ಕಷ್ಟಕರ ಎನ್ನುವಂತಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಯಲ್ಲಿ ಭಾರೀ ಆತಂಕ ಮನೆ ಮಾಡಿದೆ. ಕೆಲಸಕ್ಕೆ ಹೋಗಬೇಕಾದರೂ ಯೋಚಿಸುವಂತಾಗಿದೆ.