ಸಿಲಿಂಡರ್ ಲೀಕೇಜ್‍ಗೊಂಡು ಸ್ಫೋಟ- 7 ಮಂದಿ ದಾರುಣ ಸಾವು

Public TV
1 Min Read
cylinder

ಗಾಂಧಿನಗರ: ಫ್ಯಾಕ್ಟರಿಯ ಕೋಣೆಯಲ್ಲಿ  ಸಿಲಿಂಡರ್ ಸ್ಫೋಟವಾಗಿ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್ ಅಹ್ಮದಾಬಾದ್‍ನಲ್ಲಿ ನಡೆದಿದೆ.

BED 1

 

ಮಂಗಳವಾರ ರಾತ್ರಿ ಸಂಭವಿಸಿದ ಘಟನೆ ಈಗ ಬೆಳಕಿಗೆ ಬಂದಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಗ್ಯಾಸ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆಂದು ಅಸ್ಲಾಲಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಎಸ್.ಎಸ್.ಗಮೇಟಿ ನಿನ್ನೆ ತಿಳಿಸಿದ್ದಾರೆ.  ಇದನ್ನೂ ಓದಿ:  ವೈರಲ್ ವೀಡಿಯೋ: ಮದುವೆ ಮಂಟಪದಲ್ಲಿ ಲ್ಯಾಪ್‍ಟಾಪ್ ಹಿಡಿದು ಕೆಲಸ ಮಾಡಿದ ವರ

 

KARNATAKA FIRE ENGINE VEHICLE

ಫ್ಯಾಕ್ಟರಿಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಸದಸ್ಯರು ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಆ ಕೋಣೆಯಲ್ಲಿದ್ದ  ಗ್ಯಾಸ್ ಲೀಕೇಜ್ ಆಗಲು ಶುರುವಾಗಿತ್ತು. ವಾಸನೆ ಬಂದ ಕೂಡಲೇ ನೆರೆಮನೆಯವರು ಈ ಕೋಣೆಯ ಬಾಗಿಲು ತಟ್ಟಿ, ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಆದರೂ ಕಾಲ ಮಿಂಚಿ ಹೋಗಿತ್ತು. ಸ್ಫೋಟವಾಗಿದೆ. ಒಟ್ಟು 10 ಜನರು ಇಲ್ಲಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿಯೇ ಇದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

Share This Article
Leave a Comment

Leave a Reply

Your email address will not be published. Required fields are marked *