ಲಂಡನ್: ಭಾರತ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದ ಬಳಿಕ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುವುದನ್ನು ಎಲ್ಲರೂ ನೋಡಿದ್ದೇವೆ. ಈ ಸಂಭ್ರಮಾಚರಣೆಯ ಹಿಂದಿನ ಅಸಲಿ ಕಹಾನಿಯನ್ನು ಸ್ವತಃ ಅವರೇ ಇದೀಗ ರಿವೀಲ್ ಮಾಡಿದ್ದಾರೆ.
Advertisement
ತಮ್ಮ ನಿಖರ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ಗಳನ್ನು ಕಾಡಿದ ಸಿರಾಜ್, ಲಾರ್ಡ್ಸ್ ಟೆಸ್ಟ್ ನಲ್ಲಿ 4 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ 4 ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಪ್ರತಿ ವಿಕೆಟ್ ಪಡೆದಾಗಲೂ ಕೂಡ ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡಿದ್ದನ್ನು ಗಮನಿಸಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು.
Advertisement
Advertisement
ಸಂಭ್ರಮಾಚರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ನನ್ನ ಈ ರೀತಿಯ ಸಂಭ್ರಮಾಚರಣೆ ನನ್ನನ್ನು ಟೀಕೆ ಮಾಡುವವರಿಗಾಗಿ. ಟೀಕಾಕಾರರು ನನ್ನ ಬಗ್ಗೆ ಬೇಕಾದಷ್ಟು ಹೇಳಿಕೆಗಳನ್ನು ನೀಡುತ್ತಾರೆ. ನಾನು ಅವರಿಗೆ ಮಾತಿನ ಉತ್ತರ ಕೊಡಲು ಇಷ್ಟಪಡುವುದಿಲ್ಲ. ಹಾಗಾಗಿ ನನ್ನ ಬೌಲಿಂಗ್ ಮೂಲಕ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತೇನೆ ಹಾಗಾಗಿ ಈ ರೀತಿ ಸಂಭ್ರಮಾಚರಣೆ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಡಿಆರ್‌ಎಸ್ ಎಡವಟ್ಟು – ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಿರಾಜ್
Advertisement
ಸಿರಾಜ್ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈಗಾಗಲೇ ಸಿರಾಜ್ 7 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್ ಪಡೆದಿದ್ದಾರೆ. ಇದಲ್ಲದೆ ಒಂದು ಬಾರಿ ಐದು ವಿಕೆಟ್‍ಗೊಂಚಲು ಪಡೆದು ತನ್ನ ವಿಕೆಟ್ ಬೇಟೆ ಮುಂದುವರಿಸುತ್ತಿದ್ದಾರೆ.