ಧಾರವಾಡ: ಕೊರೊನಾ ಸೋಂಕಿತ ಎಂದು ವ್ಯಕ್ತಿಯೋರ್ವನನ್ನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಮರುದಿನವೇ ಆತ ಏಕಾಂಗಿಯಾಗಿ ಬಸ್ ಏರಿ ತನ್ನೂರು ಸೇರಿಕೊಂಡಿರುವ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.
Advertisement
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನಿಯಮಿತವಾಗಿ ಡಯಾಲಿಸಿಸ್ ಒಳಗಾಗುತ್ತಿದ್ದ ಅಳ್ನಾವರ ತಾಲೂಕಿನ ಡೋರಿ ಗ್ರಾಮದ ವ್ಯಕ್ತಿಯೋರ್ವನಿಗೆ ಆಂಟಿಜನ್ ಟೆಸ್ಟಿನಲ್ಲಿ ನೆಗಟಿವ್ ರಿಪೋರ್ಟ್ ಬಂದಿದೆ. ಆದರೂ ಮುಂದೆ ಸ್ವ್ಯಾಬ್ ಟೆಸ್ಟಿನಲ್ಲಿ ಆತನಿಗೆ ಪಾಸಿಟಿವ್ ಬರುತ್ತೆ ಎಂದು ಅಂದಾಜಿಸಿಕೊಂಡ ಸ್ಥಳಿಯ ಆರೋಗ್ಯ ಇಲಾಖೆ ಸಿಬ್ಬಂದಿ, ಆತನಿಗೆ ಪಾಸಿಟಿವ್ ಇದೆ ಅಂತ ಆತನ ಊರಿನಿಂದ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇಲ್ಲಿ ಬಂದ ಬಳಿಕ ಆತನಿಗೆ ಮರುದಿನ ಕೇವಲ ಡಯಾಲಿಸಿಸ್ ಮಾಡಿರುವ ವೈದ್ಯರು ಹಾಗೆಯೇ ಬಿಟ್ಟು ಕಳುಹಿಸಿ ಬಿಟ್ಟಿದ್ದಾರೆ.
Advertisement
Advertisement
ತನಗೆ ಕೊರೊನಾ ಇಲ್ಲವೇ ಇಲ್ಲ ಎಂದು ಅರಿತ ಆತ ನೇರವಾಗಿ ಧಾರವಾಡ ಹಳೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಅಳ್ನಾವರ ಬಸ್ ಏರಿ ತನ್ನೂರಿಗೆ ಬಂದು ಸೇರಿದ್ದಾನೆ. ಒಂದು ವೇಳೆ ಆತನಿಗೆ ಪಾಸಿಟಿವ್ ಇದ್ದದ್ದೇ ಆದಲ್ಲಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಬಿಟ್ಟು ಕಳುಹಿಸಿದ್ದಾದ್ರೂ ಹೇಗೆ ಎನ್ನುವ ಪ್ರಶ್ನೆ ಈಗ ಉದ್ಭವಿಸ್ತಿದೆ. ತಾಲೂಕು ಆಡಳಿತ ಮತ್ತು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಮಧ್ಯದ ಸಂವಹನ ಕೊರತೆಯ ಜೊತೆಗೆ ಬೇಜವಾಬ್ದಾರಿಯೂ ಸಹ ಇಲ್ಲಿ ಎದ್ದು ಕಾಣುತ್ತಿದೆ.
Advertisement
ಒಂದು ವೇಳೆ ಆತ ಸೋಂಕಿತ ಅಲ್ಲದೇ ಇದ್ದಲ್ಲಿ, ಆತನನ್ನು ಕರೆದುಕೊಂಡು ಬಂದು ತಾಲೂಕು ಆಡಳಿತದ ತಪ್ಪು ಮಾಡಿಂತಾಗುತ್ತದೆ. ಇಲ್ಲವೇ ಪಾಸಿಟಿವ್ ಇದ್ದದ್ದೇ ಆದಲ್ಲಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಲೋಪ ಎದ್ದು ಕಾಣುತ್ತೆ. ಪಾಸಿಟಿವ್ ಇದ್ದದ್ದೇ ಆದಲ್ಲಿ ಆತ ಸಾರ್ವಜನಿಕವಾಗಿ ಸಾರಿಗೆ ಸಂಸ್ಥೆ ಬಸ್ಸಿಲ್ಲಿಯೇ ಮನೆಗೆ ಹೋಗಿದ್ದರಿಂದ ಈ ಮೂಲಕ ಅನೇಕರಿಗೆ ಸೋಂಕು ತಗುಲಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ಈಗ ಕಾರಣವಾದಂತೆ ಆಗಿದ್ದು, ಅಧಿಕಾರಿಗಳ ಈ ಯದ್ವಾತದ್ವಾ ಕಾರ್ಯದಿಂದ ಆತನಿಗೂ ಈಗ ನಾನು ಸೊಂಕಿತನೋ? ಅಲ್ಲವೋ ಎನ್ನುವ ಗೊಂದಲ ಉಂಟಾಗಿದೆ. ಅಲ್ಲದೇ ಈತನ ಗ್ರಾಮದ ಜನರಿಗೆ ಕೂಡ ಈಗ ಇದು ದೊಡ್ಡ ಪ್ರಶ್ನೆಯಾಗಿದೆ.