– ಅಡಕತ್ತರಿಯಲ್ಲಿ ಸಿಲುಕಿದ ಶಿಕ್ಷಣ ಇಲಾಖೆ
– ಪರೀಕ್ಷೆ ಮಾಡಿದ್ರೂ ಕಷ್ಟ, ಮಾಡದೇ ಇದ್ರೂ ಸಮಸ್ಯೆ
ಬೆಂಗಳೂರು: ಕೊರೊನಾ ಎರಡನೇ ಅಲೆಗೆ ಸಿಬಿಎಸ್‍ಇ 12ನೇ ತರಗತಿಯ ಪರೀಕ್ಷೆ ರದ್ದಾದ ಬೆನ್ನಲ್ಲೇ ಕರ್ನಾಟಕದಲ್ಲಿ ಪರೀಕ್ಷೆ ರದ್ದಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯದಲ್ಲಿ ಪರೀಕ್ಷೆ ನಡೆಸುವುದು, ರದ್ದಾಗುವುದು ತಜ್ಞರು ನೀಡುವ ವರದಿಯ ಮೇಲೆ ನಿಂತಿದೆ. ತಜ್ಞರ ವರದಿ ಆಧಾರಿಸಿ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.
Advertisement
Government of India has decided to cancel the Class XII CBSE Board Exams. After extensive consultations, we have taken a decision that is student-friendly, one that safeguards the health as well as future of our youth. https://t.co/vzl6ahY1O2
— Narendra Modi (@narendramodi) June 1, 2021
Advertisement
2 ದಿನಗಳಲ್ಲಿ ತಜ್ಞರು, ಅಧಿಕಾರಿಗಳ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಲಿದ್ದಾರೆ. ಕಳೆದ ವರ್ಷ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಆದರೆ ಕೊರೊನಾ ಕಾಲದಲ್ಲಿ ಪರೀಕ್ಷೆ ನಡೆಸುವುದು ಬಹಳ ಅಪಾಯಕಾರಿ. ಪರೀಕ್ಷೆ ನಡೆಸದೇ ಹೋದರೂ ಸರ್ಕಾರಕ್ಕೆ ಸಮಸ್ಯೆಯಾಗಲಿದೆ. ಒಟ್ಟಿನಲ್ಲಿ ಪರೀಕ್ಷೆ ಎಂಬ ಅಡಕತ್ತರಿಯಲ್ಲಿ ಶಿಕ್ಷಣ ಇಲಾಖೆ ಸಿಲುಕಿದೆ. ಇದನ್ನೂ ಓದಿ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು
Advertisement
ಸರ್ಕಾರದ ಮುಂದಿರುವ ಆಯ್ಕೆಗಳೇನು?
ರಾಜ್ಯದಲ್ಲೂ 12 ಮತ್ತು 10 ನೇ ತರಗತಿ ಪರೀಕ್ಷೆ ರದ್ದು ಮಾಡಬಹುದು. ಪರೀಕ್ಷೆ ರದ್ದತಿ ಬದಲು ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ಮಾಡಲೂಬಹುದು. ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ತಂದು ಎಕ್ಸಾಂ ನಡೆಸಬಹುದು. ಪರೀಕ್ಷಾ ಅವಧಿ ಕಡಿತ, ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆ ಮಾಡಬಹುದು. ಪರೀಕ್ಷಾ ಅಂಕಗಳನ್ನ ಕಡಿತ ಮಾಡಿ ಪರೀಕ್ಷೆ ನಡೆಸಬಹುದು. ಪಬ್ಲಿಕ್ ಪರೀಕ್ಷೆ ಬದಲಾಗಿ ಆಯಾ ಶಾಲಾ-ಕಾಲೇಜುಗಳ ಹಂತದಲ್ಲಿ ಪರೀಕ್ಷೆ. ಆಫ್‍ಲೈನ್ ಬದಲಾಗಿ ಆನ್‍ಲೈನ್ ಮೂಲಕ ಪರೀಕ್ಷೆ ನಡೆಸಬಹುದು. ತರಗತಿಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸಿ ಫಲಿತಾಂಶ ಪ್ರಕಟಿಸಲೂಬಹುದು.
Advertisement
ಪರೀಕ್ಷೆ ಇಲ್ಲದೆ ಪಾಸ್ ಏನಾಗಬಹುದು?
ಶೈಕ್ಷಣಿಕ ಗುಣಮಟ್ಟಕ್ಕೆ ಭಾರೀ ಹೊಡೆತ ಬೀಳುವುದರ ಜೊತೆಗೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು. ನೀಟ್, ಸಿಇಟಿ ಸೀಟ್ ಹಂಚಿಕೆಯಲ್ಲಿ ಭಾರೀ ಗೊಂದಲವಾಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲು ಏರಬಹುದು. ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಬಹುದು. ಕೆಲ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಇದನ್ನೂ ಓದಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್
ಪರೀಕ್ಷೆ ನಡೆಸಿದ್ರೆ ಏನಾಗಬಹುದು?
ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೋವಿಡ್ ಅಪಾಯವಾಗಿ ಸೋಂಕು ಸ್ಫೋಟ ಆಗಬಹುದು. ಕೋವಿಡ್ ಸಾವು ನೋವು ಹೆಚ್ಚಾಗಬಹುದು.
ತಜ್ಞರು ಹೇಳೋದು ಏನು?
ಕೊರೊನಾ ಸಮಯದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಅಲ್ಲ. ಪರೀಕ್ಷೆಗೆ ಸರ್ಕಾರ ಆತುರ ಪಡಬಾರದು. ಪರೀಕ್ಷೆ ಮಾಡಲೇಬೇಕು ಅಂದರೆ ಸೋಂಕು ನಿಯಂತ್ರಣಗೊಂಡ ಬಳಿಕ ನಡೆಸಿ. ಶಾಲಾ-ಕಾಲೇಜುಗಳ ಹಂತದಲ್ಲಿಯೇ ಆಫ್‍ಲೈನ್ ಬದಲು ಆನ್‍ಲೈನ್ ಪರೀಕ್ಷೆ ನಡೆಸಬೇಕು.
ಪರೀಕ್ಷೆ ಬೇಡ ಎನ್ನುವವರ ವಾದ ಏನು?
ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಬಾರದು. ಮಕ್ಕಳ ಶಿಕ್ಷಣಕ್ಕಿಂತ ಮಕ್ಕಳ ಜೀವ ನಮಗೆ ಮುಖ್ಯ. ಈ ಕೊರೊನಾ ವರ್ಷದಲ್ಲಿ ಪರೀಕ್ಷೆಯೇ ಬೇಡ. ಕೇಂದ್ರದ ಮಾದರಿಯಲ್ಲಿ ಎಲ್ಲರನ್ನು ಪಾಸ್ ಮಾಡಿ.
ಪರೀಕ್ಷೆ ಬೇಕು ಎನ್ನುವವರ ವಾದ ಏನು?
ಸರ್ಕಾರ ಪರೀಕ್ಷೆ ರದ್ದು ಮಾಡಬಾರದು. ಎಸ್‍ಎಸ್‍ಎಲ್‍ಸಿ ಮತ್ತು ಸೆಕೆಂಡ್ ಪಿಯುಸಿ ಪರೀಕ್ಷೆ ಮುಖ್ಯ. ಸಾಮೂಹಿಕವಾಗಿ ಪಾಸ್ ನಿರ್ಧಾರ ಸರಿಯಲ್ಲ. ಒಂದು ವೇಳೆ ಎಲ್ಲರನ್ನೂ ಪಾಸ್ ಮಾಡಿದರೆ ಅಷ್ಟು ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಸೀಟ್ ಸಿಗಲಾರದು. ಬೇಡಿಕೆ ಜಾಸ್ತಿಯಾದರೆ ಕಾಲೇಜುಗಳೇ ಪರೀಕ್ಷೆ ನಡೆಸಿ ಪ್ರವೇಶ ನೀಡಬಹುದು. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ನಡೆಸಲಿ. ಇಲ್ಲ ಅಂದ್ರೆ ನೀಟ್, ಸಿಇಟಿ ವೇಳೆ ಮಕ್ಕಳಿಗೆ ತೊಂದರೆ ಆಗುತ್ತದೆ.
ಕರ್ನಾಟಕದಲ್ಲಿ ಪರೀಕ್ಷೆ ಬೇಕೇ? ರದ್ದು ಮಾಡಬೇಕೇ? ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.