ನವದೆಹಲಿ: 10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯನ್ನು ರದ್ದು ಮಾಡಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
SG: Cbse has scheme in which marks scored in past 3 exams will be taken in account.
For class 12, exams will be conducted "as soon as situation is conducive." "Marks for students who opt for class 12 exams will have that marks as final."
— Bar & Bench (@barandbench) June 25, 2020
Advertisement
ದೇಶದಲ್ಲಿ ದಿನೇ ದಿನೇ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಪೋಷಕರಲ್ಲಿ ಆತಂಕ ಉಂಟಾಗಿತ್ತು. ಹೀಗಾಗಿ 12ನೇ ತರಗತಿಯ ಬಾಕಿ ಇರುವ ವಿಷಯಗಳ ಪರೀಕ್ಷೆಗಳನ್ನು ರದ್ದುಪಡಿಸಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧಾರ ತಿಳಿಸುವಂತೆ ಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು.
Advertisement
SG: Our affidavit filed half an hour back states that taking into account suggestion from States, exam for Class 10 and 12 from July 1 stands cancelled.
— Bar & Bench (@barandbench) June 25, 2020
Advertisement
ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಂ.ಖಾನ್ವಿಕರ್ ಅವರ ನೇತೃತ್ವದ ಪೀಠಕ್ಕೆ 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿರುವ ವಿಚಾರವನ್ನು ತಿಳಿಸಿದರು. ಅಷ್ಟೇ ಅಲ್ಲದೇ ಕೊನೆಯ ಮೂರು ಪರೀಕ್ಷೆಯ ಆಧಾರದ ಮೇಲೆ ಅಂಕಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೋರ್ಟ್ ಗಮನಕ್ಕೆ ತಂದರು.
Advertisement
SG: However, those who do not opt for exams, will have their past exams make up for their performance and assessment accordingly.
CBSE Class 12 exams is thus optional.
— Bar & Bench (@barandbench) June 25, 2020
ಈಗಾಗಲೇ ಹಲವು ವಿಷಯಗಳ ಪರೀಕ್ಷೆ ಮುಗಿದಿದ್ದು, ಬಾಕಿ ವಿಷಯಗಳ ಪರೀಕ್ಷೆಯನ್ನು ಜುಲೈ ಒಂದರಿಂದ 15ರವರೆಗೆ ನಡೆಸಲು ಸಿಬಿಎಸ್‌ಇ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.
SG: We will notify the new system in place. Experts are there who will look at it.
J Khanwilkar (to petitioner): Let the authorities do their job.
— Bar & Bench (@barandbench) June 25, 2020