ಹಾಸನ: ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತ ಆತಂಕ ಮೂಡಿಸುತ್ತಿದ್ದ ಯುವಕರಿಗೆ ಸಿನಿಮೀಯ ಶೈಲಿಯಲ್ಲಿ ಬಂದ ಹಾಸನ ಪೊಲೀಸರು ಬಿಸಿಮುಟ್ಟಿಸಿ, ವಶಕ್ಕೆ ಪಡೆದಿದ್ದಾರೆ.
ಇಂದು ಹಾಸನದ ಬಸಟ್ಟಿಕೊಪ್ಪಲು ಬಳಿ ಯುವಕರ ತಂಡವೊಂದು ಕುಡಿದ ಮತ್ತಿನಲ್ಲಿ ಕೊರಳಪಟ್ಟಿ ಹಿಡಿದುಕೊಂಡು ಗಲಾಟೆ ಮಾಡುತ್ತಿತ್ತು. ಇದನ್ನು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷ್ಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪುಂಡರಿಗೆ ಲಾಠಿ ರುಚಿ ತೋರಿಸಿ ಜೀಪಿನಲ್ಲಿ ಕರೊಯ್ದಿದ್ದಾರೆ. ಈ ಮೂಲಕ ಗಲಾಟೆ ಮಾಡುವ ಪುಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಲಾಕ್‍ಡೌನ್ ನಂತರ ಹಾಸನದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದವು. ಯುವಕರು ಕುಡಿದು ಗಲಾಟೆ ಮಾಡಿಕೊಳ್ಳುವುದು ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರೂ ಕೆಲವರು ತಮ್ಮ ನಡತೆ ಬದಲಾಯಿಸಿಕೊಂಡಿರಲಿಲ್ಲ. ಹೀಗಾಗಿ ಯಾರಾದರೂ ಗಲಾಟೆ ಮಾಡುವುದು ಕಂಡು ಬಂದರೆ ಕರೆ ಮಾಡಿ ನಮಗೆ ತಿಳಿಸಿ. ಪುಂಡರಿಗೆ ಬುದ್ಧಿ ಕಲಿಸಿ ಮುಂದಾಗುವ ಅನಾಹುತ ತಪ್ಪಿಸುತ್ತೇವೆ ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.