ಸಿನಿಮಾ ಸೀನ್ ಅಲ್ಲ- ವೈರಲ್ ಆಯ್ತು ಐಪಿಎಸ್ ಅಧಿಕಾರಿ ಹಂಚಿಕೊಂಡ ವೀಡಿಯೋ

Public TV
1 Min Read
Mobile Police

ಚೆನ್ನೈ: ಐಪಿಎಸ್ ಅಧಿಕಾರಿ ಮಹೇಶ್ ಅಗರ್ವಾಲ್ ಹಂಚಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿಯ ಸಾಹಸಹಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಿನಿಮಾಗಳಲ್ಲಿ ಪೊಲೀಸರು ಕಳ್ಳರನ್ನ ಚೇಸ್ ಮಾಡಿ ಕಳ್ಳರನ್ನು ಹಿಡಿಯುವ ದೃಶ್ಯಗಳನ್ನ ನೋಡಿರುತ್ತೀರಿ. ಅಂತಹವುದೇ ಘಟನೆ ಚೆನ್ನೈನಲ್ಲಿ ನಡೆದಿದೆ. ಗ್ರೇಟರ್ ಚೆನ್ನೈನಲ್ಲಿ ಎಸ್‍ಐ ಅಂತ್ಲಿನ್ ರಮೇಶ್ ಮೊಬೈಲ್ ಕಳ್ಳರನ್ನ ಬೈಕಿನಲ್ಲಿ ಚೇಸ್ ಮಾಡಿ ಹಿಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ.

Mobile Police 1

ಬೈಕ್ ಮೇಲೆ ಹೊರಟ ಇಬ್ಬರು ಮೊಬೈಲ್ ಕಳ್ಳರನ್ನ ರಮೇಶ್ ಹಿಂಬಾಲಿಸಿ ಹಿಡಿದಿದ್ದಾರೆ. ಓರ್ವ ಬೈಕಿನಿಂದ ಇಳಿದು ಓಡಿ ಹೋಗಿದ್ದಾನೆ. ಮತ್ತೋರ್ವ ಬೈಕ್ ನಲ್ಲಿ ಹೋಗಲು ಪ್ರಯತ್ನಿಸಿದ್ರೂ ಬಿಡದ ರಮೇಶ್ ಆತನ ಶರ್ಟ್ ಹಿಡಿದು ನಿಲ್ಲಿಸಿದ್ದಾರೆ. ಈ ಎಲ್ಲ ದೃಶ್ಯಗಳು ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳ್ಳರು ಒಟ್ಟು 11 ಮೊಬೈಲ್ ಕಳ್ಳತನ ಮಾಡಿದ್ದರು.

ಎಸ್‍ಐ ರಮೇಶ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಐಪಿಎಸ್ ಮಹೇಶ್ ಅಗರ್ವಾಲ್ ತಮ್ಮ ಕಚೇರಿಗೆ ಕರೆಸಿಕೊಂಡು ಸ್ಮರಣಿಗೆ ನೀಡಿ ಗೌರವಿಸಿದ್ದಾರೆ. ಜೊತೆಗೆ ರಮೇಶ್ ಅವರ ಜೊತೆ ಟೀ ಪಾರ್ಟಿ ಮಾಡಿದ್ದಾರೆ.

Share This Article