ನವದೆಹಲಿ: ಕೋವಿಡ್ 19 ನಿಂದ ಸ್ಥಗಿತಗೊಂಡಿದ್ದ ಶೂಟಿಂಗ್ ಚಟುವಟಿಕೆಗಳಿಗೆ ಸುರಕ್ಷಾ ಮಾರ್ಗಸೂಚಿಯನ್ನು(ಎಸ್‌ಒಪಿ) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಗೃಹ ಸಚಿವಾಲಯ ಮತ್ತು ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿದ ಬಳಿಕ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
Advertisement
Advertisement
ಮಾರ್ಚ್ 25 ರಂದು ಲಾಕ್‌ಡೌನ್ ಘೋಷಣೆಯಾದ ಬಳಿಕ ಶೂಟಿಂಗ್ ಕಾರ್ಯಗಳು ಸ್ಥಗಿತಗೊಂಡಿತ್ತು. 68 ದಿನಗಳ ಬಳಿಕ ಕೇಂದ್ರ ಸರ್ಕಾರ ಜೂನ್ 1 ರಿಂದ ಮಾರ್ಗಸೂಚಿಯನ್ನು ಬಿಡುಗಡೆ ಒಂದೊಂದೇ ಕ್ಷೇತ್ರಗಳ ಚಟುವಟಿಕೆಗಳಿಗೆ ಅನುಮತಿ ನೀಡಿತ್ತು. ಈಗ ಸಿನಿಮಾ ಮತ್ತು ಟಿವಿ ಸೀರಿಯಲ್ ಶೂಟಿಂಗ್‌ಗೆ ಅನುಮತಿ ನೀಡಿದೆ.
Advertisement
ಕರ್ನಾಟಕ ಸರ್ಕಾರ ಮೇ 25 ರಿಂದ ಕನ್ನಡ ಧಾರಾವಾಹಿಗಳ ಶೂಟಿಂಗ್‌ಗೆ ಅನುಮತಿಯನ್ನು ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 19 ರಿಂದ ಧಾರಾವಾಹಿ, ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅನೇಕ ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ ಹಿನ್ನೆಲೆಯಲ್ಲಿ ಹೀಗಾಗಿ ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ಮಾಡುವಂತೆ ಸೂಚನೆ ನೀಡಲಾಗಿತ್ತು.
Advertisement
ಮಾರ್ಗಸೂಚಿಯಲ್ಲಿ ಏನಿದೆ?
– ಶೂಟಿಂಗ್ ವೇಳೆ ಹೀರೋ/ಹೀರೋಯಿನ್‍ಗೆ ಮಾಸ್ಕ್ ರಿಯಾಯಿತಿ
– ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ
– ಸಾಮಾಜಿಕ ಅಂತರ ಇಟ್ಟುಕೊಂಡೇ ಶೂಟಿಂಗ್ ನಟಿಸಬೇಕು
– ಚಿತ್ರೀಕರಣ ಬಳಿಕ ನಟ ನಟಿಯರು ಮಾಸ್ಕ್ ಧರಿಸಬೇಕು
– ಶೂಟಿಂಗ್ ಸ್ಥಳಕ್ಕೆ ಪ್ರೇಕ್ಷಕರಿಗೆ ಅವಕಾಶ ಇಲ್ಲ
– ಶೂಟಿಂಗ್ ವೇಳೆ ಕಲಾವಿದರು ಅಲ್ಲದವರು ಎಲ್ಲರೂ ಮಾಸ್ಕ್ ಧರಿಸಲೇಬೇಕು
– ಕಾಸ್ಟೂಮ್ಸ್, ಮೇಕಪ್ ಕಿಟ್ ಹಂಚಿಕೊಳ್ಳುವಂತಿಲ್ಲ
– ಎಲ್ಲ ವಸ್ತುಗಳನ್ನು ಸ್ಯಾನಿಟೈಜ್ ಮಾಡಿದ ನಂತರವೇ ಬಳಸಬೇಕು
– ಮೇಕಪ್ ಮ್ಯಾನ್, ಹೇರ್ ಡಿಸೈನರ್ಸ್ ಪಿಪಿಇ ಕಿಟ್ ಧರಿಸಬೇಕು
– ಲ್ಯಾಪಲ್ ಮೈಕ್‍ಗಳನ್ನು ಒಬ್ಬರಿಂದ ಮತ್ತೊಬ್ಬರು ಹಂಚಿಕೊಳ್ಳುವಂತಿಲ್ಲ
– ಥರ್ಮಲ್ ಸ್ಕಾನರ್ ಮೂಲಕ ಎಲ್ಲರನ್ನು ಪರೀಕ್ಷೆ ನಡೆಸಿ ಒಳಗಡೆ ಬಿಡಬೇಕು.
– ಏರ್ ಕಂಡಿಷನ್‌ಗಳು 20-30 ಡಿಗ್ರಿ ಸೆಲ್ಶಿಯಸ್‌ನಲ್ಲಿ ಇರಬೇಕು
– ಎಲ್ಲರೂ ಹಂಚಿಕೊಳ್ಳಬಹುದಾದ ಕೆಫೆಟೇರಿಯಾ, ಮೇಕಪ್ ರೂಂ, ಎಡಿಟ್ ರೂಂ, ವ್ಯಾನಿಟಿ ವ್ಯಾನ್‌ಗಳು, ವಾಷ್‌ರೂಂಗಳನ್ನು ಆಗಾಗ ಸ್ಯಾಟಿಟೈಸ್ ಮಾಡಬೇಕು.
– ಹೊರಾಂಗಣ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ ಮೊದಲೇ ಮಾತುಕತೆ ನಡೆಸಿರಬೇಕು.