-ಕಿಸ್, ಹಗ್ ಮಾಡುವಂತಿಲ್ಲ
ಬೆಂಗಳೂರು: ಲಾಕ್‍ಡೌನ್ ರಿಲೀಫ್ ಬೆನ್ನಲ್ಲೇ ಧಾರಾವಾಹಿಗಳು ಚಿತ್ರೀಕರಣ ಆರಂಭಿಸಿವೆ. ಇದೀಗ ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ಪ್ರೊಡಸರ್ಸ್ ಗಿಲ್ಡ್ ಇಂಡಿಯಾ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Advertisement
ಹೊಸ ನಿಯಮಗಳು: ಶೂಟಿಂಗ್ ವೇಳೆ ಅನಗತ್ಯವಾಗಿ ಕಿಸ್ ಮತ್ತು ಹಗ್ ಮಾಡಿಕೊಳ್ಳುವಂತಿಲ್ಲ. ಶೂಟಿಂಗ್ ಸೆಟ್, ಸ್ಟೂಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವಂತಿಲ್ಲ. ಚಿತ್ರೀಕರಣ ವೇಳೆ ತಂತ್ರಜ್ಞರು ಸೇರಿದಂತೆ ಎಲ್ಲ ಕಲಾವಿದರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಂದಿನ ಮೂರು ತಿಂಗಳವರೆಗೆ ಚಿತ್ರೀಕರಣದಲ್ಲಿ 60 ವರ್ಷ ಮೀರಿದ ಕಾರ್ಮಿಕರು ಮತ್ತು ಕಲಾವಿದರು ಭಾಗಿಯಾಗುವಂತಿಲ್ಲ. ಚಿತ್ರೀಕರಣ ಸಮಯದಲ್ಲಿ ತಂತ್ರಜ್ಞರು ಮಾಸ್ಕ್, ಗ್ಲೌಸ್ ಧರಿಸಿ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಬೇಕು.
Advertisement
Advertisement
ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಕೇಳುವ ಸಲುವಾಗಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರಿ ಚರ್ಚಿಸಿದೆ. ಈ ಸಂಬಂಧ ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕರೆ ಕಡ್ಡಾಯವಾಗಿ ಎಸಿ ಬಳಸಬಾರದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಬಿಬಿಎಂಪಿ ತಿಳಿಸಿದೆ.