– ಕಾಫಿ ಡೇ ಸಂಸ್ಥಾಪಕನ ಬಳಿಕ 14 ಮಂದಿ ಸೂಸೈಡ್
– 55 ಲಕ್ಷ ರೂ. ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ
ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ, ಕೋಟಿ ಒಡೆಯ ವಿ.ಜಿ. ಸಿದ್ಧಾರ್ಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಕರುಣಿಸಲಾಗಿದೆ.
Advertisement
ಹೌದು. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ವರ್ಷವೇ ಕಳೆದು ಹೋಗಿದೆ. ಮಂಗಳೂರಿನ ಜಪ್ಪಿನಮೊಗರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ದಿನದಿಂದಲೇ ಈ ಸೇತುವೆಗೆ ತಡೆಬೇಲಿ ನಿರ್ಮಿಸಬೇಕೆಂದು ಸಾಕಷ್ಟು ಒತ್ತಾಯ ಕೇಳಿ ಬಂದಿದ್ದು, ರಾಜಕಾರಣಿಗಳು ಕೂಡ ಒಪ್ಪಿಕೊಂಡಿದ್ರು. ಇದನ್ನೂ ಓದಿ: ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ
Advertisement
Advertisement
ಅಂದಿನಿಂದ ಇಂದಿನವರೆಗೆ ಈ ಸೇತುವೆಯಿಂದ ನದಿಗೆ ಹಾರಿ ಬರೋಬ್ಬರಿ 14 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಜಾಗವೊಂದು ಸೂಸೈಡ್ ಪಾಯಿಂಟ್ ಆಗಿತ್ತು. ಇದೀಗ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಒದಗಿ ಬಂದಿದೆ. ಇದನ್ನೂ ಓದಿ: ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ
Advertisement
ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆಯ ಬಳಿಕ ಈ ಸೇತುವೆ ಬಳಿ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ
ಸೇತುವೆ 800 ಮೀ.ಉದ್ದವಿದೆ. ಸೇತುವೆಯ ತಡೆಗೋಡೆಯ ಮೇಲೆ ರಕ್ಷಣಾ ಬೇಲಿಯು 5 ಅಡಿ ಎತ್ತರವಿದ್ದು, ಬೇಲಿಯ ಮೇಲ್ಗಡೆಯೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳು ತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗುತ್ತಿದೆ.