ನವದೆಹಲಿ: ಕೊರೊನಾ ನಿಗ್ರಹಕ್ಕಾಗಿ ದೇಶಿಯವಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ವಿಚಾರದಲ್ಲಿ ಮತ್ತೊಂದು ಮಹತ್ವದ ಬೆಳೆವಣಿಯಾಗಿದೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿದೆ.
ಈ ಬಗ್ಗೆ ಎನ್‍ಐಐ ನಿರ್ದೇಶಕ ಅಮೂಲ್ಯ ಪಾಂಡಾ ಮಾಹಿತಿ ನೀಡಿದ್ದಾರೆ. ಆರಂಭಿಕವಾಗಿ ಜುಲೈನಲ್ಲಿ ಇಲಿಗಳ ಮೇಲೆ ಈ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ಬಳಿಕ ಉತ್ತಮ ಫಲಿತಾಂಶ ಬಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಜೈವಿಕ ತಂತ್ರಜ್ಞಾನ ವಿಭಾಗದ ಅಡಿಯಲ್ಲಿರುವ ಎನ್‍ಐಐ, ಕೊರೊನಾ ವೈರಸ್ ವಿರುದ್ಧ ಪ್ರೋಟೀನ್ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಇದು ಇಲಿಗಳಲ್ಲಿ ವೈರಸ್ ಗಳನ್ನು ತಟಸ್ಥಗೊಳಿಸಿದೆ ಮತ್ತು ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಸಮರ್ಥವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಆರಂಭದಲ್ಲಿ ಕೆಲವು ಇಲಿಗಳ ಮೇಲೆ ಮಾತ್ರ ಈ ಪ್ರಯೋಗ ನಡೆದಿತ್ತು. ಆರಂಭಿಕ ಪ್ರಯೋಗ ಯಶಸ್ವಿಯಾದ ಹಿನ್ನೆಲೆ ದೊಡ್ಡ ಪ್ರಮಾಣ ಇಲಿಗಳ ಸಮೂಹದ ಮೇಲೆ ಪ್ರಯೋಗ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಯೋಗ ಯಶಸ್ಸು ಕಂಡಲ್ಲಿ ಮಾನವರ ಮೇಲೆ ಪ್ರಯೋಗ ಮಾಡುವ ಯೋಚನೆಯನ್ನು ಸಂಸ್ಥೆ ಮಾಡಿದೆ.
ಇದು ಭಾರತದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮೂರನೇ ಲಸಿಕೆಯಾಗಿದೆ. ಇದಕ್ಕೂ ಮೊದಲ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಮತ್ತು ಝೈಡುಸ್ ಕ್ಯಾಡಿಲಾ ಸಂಸ್ಥೆ ಮತ್ತೊಂದು ಲಸಿಕೆ ಅಭಿವೃದ್ಧಿ ಪಡಿಸಿದೆ. ಸದ್ಯ ಈ ಎರಡು ಸಲಿಕೆಗಳು ಮಾನವರ ಮೇಲೆ ಎರಡನೇ ಹಂತದ ಪ್ರಯೋಗದಲ್ಲಿದೆ.