ಬೆಂಗಳೂರು: ಇಷ್ಟು ದಿನ ಸರ್ಕಾರದ ವಿರುದ್ಧ ಸಿಡಿ ಅಸ್ತ್ರ ಎತ್ತದ ವಿಪಕ್ಷ ಕಾಂಗ್ರೆಸ್ ಇಂದಿನಿಂದ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಸಿಡಿ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ಕೈ ಪಾಳಯ ನಿರ್ಧಾರ ಮಾಡಿದೆ. ಸಿಡಿ ಪ್ರಕರಣ ಅದರಲ್ಲಿ ಆಡಿರುವ ಕೆಲವು ಮಾತುಗಳು ಎಲ್ಲದರ ಬಗ್ಗೆಯೂ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
Advertisement
ಸಾಹುಕಾರ, ಮಹಾನಾಯಕ, ಭ್ರಷ್ಟಾಚಾರ ಚಾರ್ಜಸ್ ಎಲ್ಲವು ಸದನದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಜೊತೆಗೆ ಕೋರ್ಟ್ ಮೊರೆ ಹೋದ 6 ಜನ ಸಚಿವರ ಬಗ್ಗೆಯೂ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿಯಲು ನಿರ್ಧರಿಸಿದೆ. ಜಾರಕಿಹೊಳಿ ಸಿಡಿ ಸಂಕಷ್ಟದ ಜೊತೆಗೆ 6 ಜನ ಸಚಿವರ ಕೋರ್ಟ್ ಕಹಾನಿಯೂ ಸರ್ಕಾರಕ್ಕೆ ಬಿಸಿತುಪ್ಪವಾಗಲಿದೆ.
Advertisement
ಸದನದ ನಿಯಮಾವಳಿಯಂತಯೇ ಸಿಡಿ ಪ್ರಕರಣವನ್ನು ಚರ್ಚೆಗೆ ತಗೆದುಕೊಳ್ಳಲು ಕಾಂಗ್ರೆಸ್ ಪಟ್ಟು ಹಿಡಿಯಲು ತೀರ್ಮಾನಿಸಿದೆ. ಆದರೆ ಕಾಂಗ್ರೆಸ್ಸಿನ ನಿಲುವಳಿ ಸೂಚನೆ ಮಂಡನೆಗೆ ಸ್ಪೀಕರ್ ಅವಕಾಶ ಮಾಡಿಕೊಡ್ತಾರಾ ಅನ್ನೋದೇ ಸದ್ಯದ ಕುತೂಹಲ.
Advertisement