– ಬಸವಕಲ್ಯಾಣ ಬಿಜೆಪಿಯಲ್ಲಿ ಬಂಡಾಯ?
ಬೆಂಗಳೂರು: ಸಿಡಿ ಮಹಾ ಸಮರದ ಮಧ್ಯೆಯೇ ಉಪಚುನಾವಣ ಅಖಾಡಕ್ಕೆ ರಾಜ್ಯದಲ್ಲಿ ವೇದಿಕೆ ಸಿದ್ಧವಾಗ್ತಿದೆ. ಬೆಳಗಾವಿ ಲೋಕಸಭೆ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಉಪಚುನಾವಣ ಕಣ ಕಾವೇರಿದೆ.
ಬೆಳಗಾವಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದ್ರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಬೈ ಎಲೆಕ್ಷನ್‍ನಲ್ಲಿ ಗೆಲ್ಲುವುದೇ ನಮ್ಮ ಗುರಿ ಅಂದ್ರು.
ಎಂಇಎಸ್ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಉಪಸ್ಥಿತರಿರಲಿದ್ದಾರೆ. ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ನಾಮಪತ್ರ ಸಲ್ಲಿಸಿದ್ರು. ಬಳಿಕ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಾಪ್ ಗೌಡ ಪಾಟೀಲ್ 30 ಕೋಟಿಗೆ ಬಿಜೆಪಿಗೆ ಸೇಲಾಗಿದ್ದಾರೆ. ಪಕ್ಷ ದ್ರೋಹಿ ಪ್ರತಾಪ್‍ಗೌಡಗೆ ಠೇವಣಿ ಸಹ ಸಿಗದಂತೆ ಮಾಡಿ ಅಂತಾ ಕಾರ್ಯಕರ್ತರಿಗೆ ಕರೆ ನೀಡಿದ್ರು.
ಈ ಮಧ್ಯೆ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಸಹ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಮಾತಾಡಿದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಜನರಿಗೆ ದುಡ್ಡು ನೀಡಿ, ಅವರಿಂದ ದೇಣಿಗೆ ಪಡೆಯುವ ಗಿಮಿಕ್ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದಕ್ಕೆ ತುರವಿಹಾಳ್ ತಿರುಗೇಟು ನೀಡಿದ್ರು. ಈ ಬಗ್ಗೆ ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಘೋಷಿಸಿದ್ರು. ನಾಳೆ ಬಸವಕಲ್ಯಾಣದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಕಣಕ್ಕಿಳಿಯುವ ಸಾಧ್ಯತೆ ಇದೆ.