ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ, ಯಾವುದೇ ಕಾರಣಕ್ಕೂ ಹೆದರಬೇಡಿ- ಯುವತಿಯ ಫೋನ್‌ ಕಾಲ್‌ ಲೀಕ್‌

Public TV
2 Min Read
DK Shivakumar 2

ಬೆಂಗಳೂರು: ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಸಿಡಿ ಲೇಡಿ ಫೋನ್ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಆ ಮಹಾ ನಾಯಕ ಡಿಕೆಶಿ ನಾ ಎಂಬ ಪ್ರಶ್ನೆ ಎದ್ದಿದೆ.

DKSHI 1 1

ಸಿಡಿ ಲೇಡಿ ಸಹೋದರ ಹಾಗೂ ತಾಯಿ ಜೊತೆ ಮಾತನಾಡಿದ್ದು, ಈ ಫೋನ್ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು 3 ಕಡೆಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ನಾನು ಡಿ.ಕೆ.ಶಿವಕುಮಾರ್ ಮನೆಯ ಬಳಿ ಇದ್ದೇನೆ ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಮನೆಯವರಿಗೆ ಸಿಡಿ ಲೇಡಿ ಹೇಳಿದ್ದಾರೆ. ಅಲ್ಲದೆ ವೀಡಿಯೋದಲ್ಲಿರುವುದು ನಾನಲ್ಲ ಅದು ಗ್ರಾಫಿಕ್ಸ್, ನಿನ್ನ ಮೇಲೆ, ದೇವರ ಮೇಲೆ ಆಣೆ ವೀಡಿಯೋದಲ್ಲಿರುವುದು ನಾನಲ್ಲ ಎಂದು ಯುವತಿ ತನ್ನ ತಾಯಿಗೆ ಹೇಳಿದ್ದಾರೆ.

ವೀಡಿಯೋದಲ್ಲಿರುವುದು ನಾನಲ್ಲ ಅದು ಗ್ರಾಫಿಕ್ಸ್, ನೀನಾದರೂ ನಂಬು ಎಂದು ಸಹೋದರನಿಗೆ ತಿಳಿಸಿದ್ದಾರೆ. ಅಲ್ಲದೆ ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ ಯಾವುದೇ ಕಾರಣಕ್ಕೂ ಹೆದರಬೇಡಿ. ಎಲ್ಲವೂ ಸರಿ ಮಾಡ್ತಾರೆ, ಎಲ್ಲವನ್ನೂ ಸರಿ ಮಾಡಿಕೊಂಡು ಮನೆಗೆ ಬರುತ್ತೇನೆ ಎಂದು ಸಹೋದರ ಹಾಗೂ ತಾಯಿಗೆ ಯುವತಿ ಧೈರ್ಯ ಹೇಳಿದ್ದಾರೆ.

ಜಾರಕಿಹೊಳಿ ವಿರುದ್ಧ ಎಫ್‍ಐಆರ್
ಇಂದು ಬೆಳಗ್ಗೆ ಸಿಡಿ ಲೇಡಿ ವೀಡಿಯೋ ಬಿಡುಗಡೆ ಮಾಡಿ, ಬಳಿಕ ವಕೀಲರ ಮೂಲಕ ದೂರನ್ನೂ ಸಲ್ಲಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಸಿಡಿ ಯುವತಿಯ ಪರವಾಗಿ ವಕೀಲ ಜಗದೀಶ್ ದೂರು ನೀಡಿದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.

ಐಪಿಸಿ ಸೆಕ್ಷನ್ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ. ರೇಪ್ ಆರೋಪ ಸಾಬೀತಾದರೆ 6-10 ವರ್ಷ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ಸಿಡಿ ಲೇಡಿ ಮಾಡಿರುವ ಆರೋಪ ಏನು?
ಕೆಲಸ ಕೊಡಿಸುವುದಾಗಿ ವಂಚನೆ, ಜಾರಕಿಹೊಳಿಯಿಂದಲೇ ಸಿಡಿ ಬಿಡುಗಡೆ, ತನ್ನನ್ನು ಬಳಸಿಕೊಂಡಿರುವ ಆರೋಪ, ದೆಹಲಿಯಿಂದ ವಿಡಿಯೋ ಕಾಲ್ ಮಾಡಿ ಅಶ್ಲೀಲ ಮಾತು, ಕೆಲಸ ಕೇಳಿದ್ದಕ್ಕೆ ಜೀವ ಬೆದರಿಕೆ, ನನ್ನ ತಂದೆ-ತಾಯಿಗೂ ಬೆದರಿಕೆ, ಇದು ಅಸಲಿ ಸಿಡಿಯಾಗಿದ್ದು ಸಾರ್ವಜನಿಕ ಹುದ್ದೆಯಲ್ಲಿದ್ದು ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಎಸ್‍ಐಟಿ ಪೊಲೀಸರು ವಕೀಲರ ಮೂಲಕ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *