– ಭಯ ಇದ್ದರೆ ಮೊದಲೇ ಇಂಜಂಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆ
– ಸಿಡಿಲೇಡಿ ಜೊತೆ ಯಾವುದೇ ಸಂಪರ್ಕ ಇಲ್ಲ
ಚಿತ್ರದುರ್ಗ: ನಾನು ಸಿಡಿಲೇಡಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ. ಸಿಡಿಲೇಡಿ ಜತೆ ನನಗೆ ಯಾವುದೇ ಸಂಪರ್ಕ ಇಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಸಿಡಿ ಲೇಡಿ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಹೆಸರು ತಳುಕಿ ಹಾಕಿಕೊಂಡಿದೆ. ಯುವತಿಯ ಫೋನಿಗೆ ಸುಧಾಕರ್ ಅವರಿಂದ ಕರೆ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದರು.
ಈ ವಿಚಾರವಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿರುವ ಮಾತನಾಡಿದ ಅವರು, ನಾನು ಡಿಕೆಶಿಗೆ ಅಷ್ಟೇ ಅಲ್ಲ, ಮಾಜಿ ಸಿಎಂ ಸಿದ್ದರಾಮಯ್ಯಗೂ ಬಲಗೈ ಬಂಟನಾಗಿದ್ದೇನೆ. ಆದರೆ ಈ ಸಿಡಿಲೇಡಿ ಪ್ರಕರಣದಲ್ಲಿ ಯಾಕೆ ನನ್ನ ಹೆಸರು ಕೇಳಿಬಂತೋ ಗೊತ್ತಿಲ್ಲವೆಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.
ನನಗೂ, ಈ ಸಿಡಿಲೇಡಿಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಹಣವನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿಲ್ಲ. ಅಲ್ದೇ ದಿನನಿತ್ಯ ನನಗೆ ಅನೇಕ ಜನ ಕರೆ ಮಾಡುತ್ತಿರುತ್ತಾರೆ. ಯಾರನ್ನ ಅಂತ ನೆನಪಿಡಲಿ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ವಿಚಾರವಾಗಿ ಎಸ್‍ಐಟಿ ತನಿಖೆಗೆ ಕರೆದರೆ ನಾನು ಹೋಗ್ತೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ನನಗೆ ಭಯ ಇದ್ದಿದ್ರೆ ಈ ಮೊದಲೇ ಕೋರ್ಟ್ ನಿಂದ ಇಂಜಂಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೆ ನೀಡಿದರು.