ಬೆಂಗಳೂರು: ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ಮನೆ ಮೇಲೆ ನಿನ್ನೆ ವಿಶೇಷ ತನಿಖಾ ತಂಡ(ಎಸ್‌ಐಟಿ) ದಾಳಿ ನಡೆಸಿದ್ದು ಈ ವೇಳೆ 23 ಲಕ್ಷ ರೂ. ಹಣ ಪತ್ತೆಯಾಗಿದೆ.
ಆರ್‌ಟಿ ನಗರದಲ್ಲಿ ನೆಲೆಸಿದ್ದ ಯುವತಿಯ ಮನೆಯ ಮೇಲೆ ನಿನ್ನೆ ದಾಳಿ ನಡೆದಿತ್ತು. ದಾಳಿಯ ವೇಳೆ ಒಟ್ಟು 23 ಲಕ್ಷ ರೂ. ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
Advertisement
ಎಸ್‌ಐಟಿ ಕಳೆದ ವಾರವೇ ಯುವತಿಯ ಮನೆಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ. ಆದರೆ ವಿಚಾರಣೆ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.
Advertisement
Advertisement
ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈಕೆ ಮಾರ್ಚ್ 2ರ ರಾತ್ರಿ 9:30ಕ್ಕೆ ಮನೆಯಿಂದ ಹೊರಕ್ಕೆ ಹೋಗಿದ್ದಳು.
Advertisement
ಮಾರ್ಚ್ 2ರ ಸಂಜೆ ಸ್ಫೋಟಕ ಸಿಡಿ ರಿಲೀಸ್ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಬ್ಯಾಗ್ ಇಟ್ಟುಕೊಂಡು ಮನೆಯಿಂದ ಏಕಾಂಗಿಯಾಗಿ ಹೊರಗೆ ಬಂದ ಯುವತಿ ನಡೆದುಕೊಂಡೇ ಮುಖ್ಯ ರಸ್ತೆಗೆ ತಲುಪಿದ್ದಳು.
ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ.
ಆರಂಭದಲ್ಲಿ ಯುವತಿ ಆರ್‌ಟಿ ನಗರದ ಪಿಜಿಯಲ್ಲಿ ವಾಸವಾಗಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಆಕೆ ಪಿಜಿಯಲ್ಲಿ ಇರಲಿಲ್ಲ. ಆರ್‌ಟಿ ನಗರದ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದ ವಿಚಾರ ಲಭ್ಯವಾಗಿತ್ತು.
ಯುವತಿಯ ಬಗ್ಗೆ ಪಬ್ಲಿಕ್ ಟಿವಿ ಮನೆ ಮಾಲೀಕರನ್ನು ಮಾತನಾಡಿಸಿದೆ. ಈ ವೇಳೆ ಅವರು, ಇದು ಪಿಜಿಯಲ್ಲ. ಅವರಿಗೆ ಬಾಡಿಗೆ ನೀಡಿದ್ದೆ. ಬಾಡಿಗೆಯಲ್ಲಿ ನಾಲ್ಕು ಜನ ಸೇರಿ ಮನೆ ತೆಗೆದುಕೊಂಡಿದ್ದಾರೆ. 2018ರಿಂದ ಅವರು ಇಲ್ಲಿ ನೆಲೆಸಿದ್ದರು. ರೂಮಿನಲ್ಲ ಆಕೆ ಒಬ್ಬಳೇ ಇದ್ದಳು. ಸೋಮವಾರ ಇಲ್ಲಿಂದ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.