ಬೆಂಗಳೂರು: ಮಗಳ ಹೇಳಿಕೆ ಪರಿಗಣಿಸದಂತೆ ಸಿಡಿ ಯುವತಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ನನ್ನ ಮಗಳ ಹೇಳಿಕೆ ಪರಿಗಣಿಸಬೇಡಿ ಎಂದು 164 ಅನ್ನು ರದ್ದು ಮಾಡುವಂತೆ ಸಿಡಿ ಯುವತಿ ತಂದೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ನಡೆಸಿದೆ.
ಸಿಆರ್ ಪಿಸಿ ಸೆ. 164 ಹೇಳಿಕೆ ಕೋರ್ಟ್ ನಲ್ಲಿದೆ, ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಹೇಳಿಕೆಯ ಪ್ರತಿ ಸಿಗುವುದಿಲ್ಲ. ಹೀಗಾಗಿ ಹೇಳಿಕೆ ಹಾಜರುಪಡಿಸಲು ವಿನಾಯಿತಿ ನೀಡುವಂತೆ ಯುವತಿ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದರು. ಹೀಗಾಗಿ ಹೈಕೋರ್ಟ್ ತಾತ್ಕಾಲಿಕ ವಿನಾಯಿತಿ ನೀಡಿದ್ದು, ರಾಜ್ಯ ಸರ್ಕಾರ, ಎಸ್‍ಐಟಿ, ಕಬ್ಬನ್ ಪಾರ್ಕ್ ಪೊಲೀಸರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.
ಮಾರ್ಚ್ 31ರಂದು ಸಿಡಿ ಯುವತಿ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನನ್ನ ಮಗಳ ಹೇಳಿಕೆಯನ್ನು ಪರಿಗಣಿಸದಂತೆ 21 ಪುಟಗಳ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯ ತಂದೆ ಏನ್ ಮನವಿ ಮಾಡಿದ್ದರು. ನನ್ನ ಮಗಳು ಒತ್ತಡ, ಬಲವಂತದಿಂದ ಹೇಳಿಕೆ ಕೊಡ್ತಿದ್ದಾಳೆ. ಸಿಆರ್ಪಿಸಿ 164 ಅಡಿ ದಾಖಲಾಗಿರುವ ಹೇಳಿಕೆ ರದ್ದು ಮಾಡಿ. ಮೆಡಿಕಲ್ ಟೆಸ್ಟ್ ಮಾಡಿಸದೇ ಸಿಆರ್ಪಿಸಿ 164 ಹೇಳಿಕೆ ಸರಿಯಲ್ಲ. ನನ್ನ ಮಗಳು ಸಾಕಷ್ಟು ದಿನದಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ನನ್ನ ಮಗಳು ಸ್ವ-ಇಚ್ಛೆಯಿಂದ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದರು.
ನನ್ನ ಮಗಳು ಪ್ರಭಾವ, ಒತ್ತಡದ ಬಲಿಪಶುವಾಗಿದ್ದಾಳೆ. ನಮ್ಮ ಸುಪರ್ದಿಗೆ ಅಥವಾ ನ್ಯಾಯಾಂಗದ ಸುಪರ್ದಿಯಲ್ಲಿರಿಸಿ. ವಕೀಲರ ಮೂಲಕ ನನ್ನ ಮಗಳು ಕೋರ್ಟ್‍ಗೆ ಹಾಜರಾಗಿದ್ದಾಳೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಏಕೆ ಉಪಸ್ಥಿತರಿದ್ದರು..?, ಮಗಳು ಒತ್ತಡಕ್ಕೆ ಒಳಗಾಗಿದ್ದರೆ ತನಿಖಾಧಿಕಾರಿ ಮುಂದೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದ್ದರು.