ಬೆಂಗಳೂರು: ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ಆರೋಗ್ಯ ಹಾಗೂ ವೈದ್ಯಕೀಯ ಕಲ್ಯಾಣ ಇಲಾಖಾ ಸಚಿವ ಸುಧಾಕರ್ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕೂಡ ವೇದಿಕೆಯ ಮೇಲೆ ಫೋನ್ ನಲ್ಲಿ ಬ್ಯುಸಿಯಾಗಿದ್ದರು.
ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬಿದ್ದಂತೆ ಆರು ಮಂದಿ ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ವರದಿ ಪ್ರಸಾರ ಮಾಡಬಾರದು ಎಂದು ಕೋರ್ಟಿಗೆ ಮೊರೆ ಹೋಗಿದ್ದಾರೆ. ಈ ಆರು ಮಂದಿ ಸಚಿವರಲ್ಲಿ ಬಿ.ಸಿ ಪಾಟೀಲ್ ಮತ್ತು ಸುಧಾಕರ್ ಕೂಡ ಸೇರಿದ್ದಾರೆ. ಇಂದು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಈ ಇಬ್ಬರು ಸಚಿವರುಗಳು ವೇದಿಕೆಯಲ್ಲಿ ಮಾತ್ರ ಫೋನ್ ನಲ್ಲಿ ಬ್ಯುಸಿಯಾಗಿದ್ದರು.
ಗಂಗಾವತಿಯಲ್ಲಿ ನಡೆಯುತ್ತಿರುವ ನೂತನ ಕೃಷಿ ವಿಶ್ವವಿದ್ಯಾಲಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕೃಷಿ ಸಚಿವ ಬಿ.ಸಿ ಪಾಟೀಲ್ ವೇದಿಕೆಯ ಮೇಲೆ ಕುಳಿತಿದ್ದರು ಕೂಡ ಕೋರ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮೊಬೈಲ್ ನಲ್ಲಿ ಅಪ್ಡೇಡ್ ತಿಳಿದುಕೊಳ್ಳುವುದರಲ್ಲಿ ನಿರತರಾಗಿದ್ದರು. ಮೊಬೈಲ್ ಮೂಲಕ ಬೆಳವಣಿಗೆ ಗಮನಿಸುತ್ತಿದ್ದ ಬಿ.ಸಿ.ಪಾಟೀಲ್, ಬೇಗ ಬೇಗ ಕಾರ್ಯಕ್ರಮ ಮುಗಿಸಿ ಎಂದು ಅಧಿಕಾರಿಗಳಿಗೆ ಹೇಳುತ್ತಿರುವುದು ಬಯಲಾಗಿದೆ.
ಗಂಗಾವತಿಯಲ್ಲಿ ಬಿಸಿ ಪಾಟೀಲ್ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರೆ. ಇತ್ತ ಚಿಕ್ಕಬಳ್ಳಾಪುರದಲ್ಲಿ ನಡೆದ ಬೃಹತ್ ಕ್ಯಾನ್ಸರ್ ತಪಾಸಣಾ ಹಾಗೂ ಅರಿವು ಕಾರ್ಯಕ್ರಮದಲ್ಲಿ ಭಾಗಿಯಾದ ಸುಧಾಕರ್ ಕೂಡ ಫೋನ್‍ನಲ್ಲಿ ಬ್ಯುಸಿಯಾಗಿ ಕೋರ್ಟ್ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ನಿರತವಾಗಿರುವುದು ಕಂಡುಬಂತು.