– ಪಾಪ, ಅವರ ಬಗ್ಗೆ ಮಾತನಾಡಲ್ಲ
ಬೆಳಗಾವಿ: ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಮೇಶ್ ಜಾರಕಿಹೊಳಿ ಅವರು ದಿನಕ್ಕೊಂದು ಮಾತನಾಡುತ್ತಾರೆ. ಸಿಡಿ ಬಗ್ಗೆ ಮಾತಾಡಲ್ಲ ಎಲೆಕ್ಷನ್ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಅವರು ದಿನಕ್ಕೊಂದು ಮಾತನಾಡುತ್ತಾರೆ. ಏನ್ ಏನೋ ಮಾತನಾಡುತ್ತಾರೆ ಅವರ ಸುದ್ದಿಯನ್ನು ಬಿಟ್ಟು ಬಿಡಿ. ಎಲ್ಲರಿಗೂ ಒಳ್ಳೆಯದಾಗಲಿ. ಪಾಪ ಅವರ ಬಗ್ಗೆ ನಾನು ಏನ್ ಮಾತನಾಡಲಿ ಎಂದು ಹೇಳಿದ್ದಾರೆ.
ಸಿಡಿ ಲೇಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರು ತಳುಕು ಹಾಕಿಕೊಂಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದಾರೆ. ನಾನು ಸಿಡಿಯ ಕುರಿತಾಗಿ ಮಾತನಾಡಲ್ಲ ಆ ಸುದ್ದಿಯನ್ನು ಬಿಟ್ಟು ಬಿಡಿ. ಚುನಾವಣೆ ಮುಖ್ಯ ನಮಗೆ ಮೊದಲು ಎಲೆಕ್ಷನ್ ಮಾಡೋಣ ಎಂದಿದ್ದಾರೆ.
ಎಲ್ಲಾ ಚುನಾಣೆಗಳಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುತ್ತಿದ್ದಾರೆ. ನೀವು ಗ್ಯಾಸ್ ತೆಗೆದುಕೊಳ್ಳುವಾಗ, ಪೇಟ್ರೊಲ್ ಹಾಕಿಸುವಾಗ ಯಾವುದೆ ಬೆಂಬಲ ಸಿಗದೆ ನಿಮ್ಮ ಜೇಬು ಖಾಲಿಯಾಗುತ್ತಿದೆ. ಆ ಒಂದು ಆಕ್ರೋಶವನ್ನು ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕವಾಗಿ ತೊರಿಸಬೇಕು ಎಂದು ಹೇಳಿದ್ದಾರೆ.
ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನಮ್ಮ ಪಕ್ಷವನ್ನು ಸೇರಿಕೊಳ್ಳಲು ಹಲವರು ಮುಂದೆ ಬರುತ್ತಿದ್ದಾರೆ. ಎಲ್ಲಾ ಕಾರ್ಯಕರ್ತರು ಸೇರಿಕೊಳ್ಳಿ ಪಕ್ಷವನ್ನು ಕಟ್ಟಿ. ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿ. ಸತೀಶ್ ಅವರಿವಗೆ ಒಳ್ಳೆಯ ನಾಯಕತ್ವದ ಗುಣವಿದೆ. ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು ಎನ್ನುವ ಕೆಲವು ಒಳ್ಳೆಯ ಉದ್ದೇಶವನ್ನು ಹೊಂದಿದ್ದಾರೆ. ಒಳ್ಳೆಯ ಅಭ್ಯರ್ಥಿ ಎಂದು ಹೇಳಿದ್ದಾರೆ.