ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡ ಮೊದಲ ದಿನವೇ ಎಸ್‍ಐಟಿ ಭರ್ಜರಿ ಬೇಟೆಯಾಡಿದ್ದು, ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದೆ.
Advertisement
ಮಾಜಿ ಸಚಿವರ ಸಿಡಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ, ಇಂದು ಒಟ್ಟು 5 ಜನರನ್ನು ಬೇಟೆಯಾಡಿದೆ. ಇದರಲ್ಲಿ ಓರ್ವ ಯುವತಿ, ನಾಲ್ವರು ಯವಕರು ಸೇರಿದ್ದಾರೆ. ಆರಂಭದಲ್ಲಿ ಯಶವಂತಪುರದಲ್ಲಿ ಓರ್ವನನ್ನು ವಶಕ್ಕೆ ಪಡದು ವಿಚಾರಣೆ ನಡೆಸಲಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದು ಬಳಿಕ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮತ್ತೊಬ್ಬನನ್ನು ವಶಕ್ಕೆ ಪಡೆದು ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಹೀಗೆ ಯಶವಂತಪುರ, ವಿಜಯನಗರ, ಚಾಮರಾಜಪೇಟೆಯಲ್ಲಿ ಒಟ್ಟು ಐವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮೂಲಕ ಎಸ್‍ಐಟಿ ನಾಲ್ಕು ಜನರನ್ನು ಬೇಟೆಯಾಡಿದೆ. ಮಡಿವಾಳದ ಟೆಕ್ನಿಕಲ್ ಸೆಂಟರ್‍ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ವಿಚಾರಣೆ ವೇಳೆ ಓರ್ವ ವ್ಯಕ್ತಿ ಸಿಡಿ ಬಗ್ಗೆ ಬಾಯ್ಬಿಟ್ಟಿದ್ದು, ಸಿಡಿ ಎಡಿಟ್ ವರ್ಷನ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾನೆ. ಅಲ್ಲದೆ ಕಬ್ಬನ್ ಪಾರ್ಕ್ ಬಳಿ ಇಬ್ಬರು ಯುವಕರಿಂದ ಸಿಡಿ ಬದಲಾಗಿದ್ದ ಬಗ್ಗೆ, ದೂರವಾಣಿ ಮೂಲಕ ಸಂಪರ್ಕ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾನೆ. ಇಬ್ಬರೂ ಹಳೆಯ ಪರಿಚಿತರಾಗಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ಮಾಡಿ ಸಿಡಿ ತಲುಪಿಸಿದ್ದೆ. ಕೆಲಸದ ಮೇಲೆ ಹೊರಗೆ ಇದ್ದೆ ಎಂದು ವ್ಯಕ್ತಿ ಹೇಳಿರುವುದು ತಿಳಿದು ಬಂದಿದೆ.