ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಶಾಸಕ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುತ್ತಿಲ್ಲ.
ಕೊರೊನಾ ನೆಗೆಟಿವ್ ಬಂದರೂ ಶಾಸಕರು ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಹೊರಗಡೆ ಓಡಾಡದಂತೆ ಹಾಗೂ ದೂರದ ಊರುಗಳಿಗೆ ಪ್ರಯಾಣ ಮಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಇನ್ನೂ ಒಂದು ವಾರ ಎಲ್ಲೂ ಸುತ್ತಾಡದೇ ರೆಸ್ಟ್ ಮಾಡುವಂತೆ ಗೋಕಾಕ್ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸದಲ್ಲಿ ರೆಸ್ಟ್ ನಲ್ಲಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಗೋಕಾಕ್‍ಗೆ ಆಗಮಿಸಿದ್ದ ಎಸ್‍ಐಟಿ ಅಧಿಕಾರಿಗಳು ಏಪ್ರಿಲ್ 20ರಂದು ವಿಚಾರಣೆ ಬರವಂತೆ ನೋಟಿಸ್ ನೀಡಲಾಗಿತ್ತು.
ಏಪ್ರಿಲ್ 1ರಂದು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಧೃಡವಾಗಿತ್ತು. ಏಪ್ರಿಲ್ 4ರಂದು ರಾತ್ರಿ 10.30ಕ್ಕೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜಾರಕಿಹೊಳಿ ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಿಪಿ, ಶುಗರ್ ಜಾಸ್ತಿಯಾಗಿದ್ದರಿಂದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಏಪ್ರಿಲ್ 7ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.