ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ದೊರೆಯುತ್ತಿದ್ದು, ಎಸ್‍ಐಟಿ ಸಹ ಅಷ್ಟೇ ಚುರುಕಾಗಿ ತನಿಖೆ ನಡೆಸುತ್ತಿದೆ. ಇದೇ ವೇಳೆ ಹಲವು ಅಚ್ಚರಿಯ ಮಾಹಿತಿ ಸಹ ಲಭ್ಯವಾಗುತ್ತಿದೆ.
Advertisement
ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಈ ವೇಳೆ ಅಚ್ಚರಿಯ ಮಾಹಿತಿ ಲಭ್ಯವಾಗುತ್ತಿದೆ. ಆರೋಪಿಗಳು ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿ ಲಕ್ಷ, ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬರೋಬ್ಬರಿ 45 ಲಕ್ಷ ರೂಪಾಯಿಯ ಫಾರ್ಚೂನರ್ ಕಾರು ಖರೀದಿಗೆ ಸಿಡಿಕೋರ ಯತ್ನಿಸಿದ್ದನು. ಈ ಸಿಡಿಕೋರನಿಗೆ ವ್ಯಕ್ತಿ 45 ಲಕ್ಷ ರೂಪಾಯಿ ನಗದು ನೀಡಿದ್ದ. ಇದೇ ಹಣದಲ್ಲಿ ವ್ಯಕ್ತಿ ಫಾರ್ಚೂನರ್ ಕಾರು ಖರೀದಿಗೆ ಯತ್ನಿಸಿದ್ದ, ಆದರೆ ನಗದು ವ್ಯವಹಾರ ಮಾಡುವುದಿಲ್ಲ ಎಂದು ಶೋ ರೂಂ ಸಿಬ್ಬಂದಿ ಹೇಳಿದ್ದಕ್ಕೆ ಕಾರ್ ಖರೀದಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
Advertisement
ವೀಡಿಯೋ ಅಪ್‍ಲೋಡ್ ಮಾಡಿದ್ದರ ಬಗ್ಗೆ ಸಹ ಎಸ್‍ಐಟಿಗೆ ಸಾಕ್ಷ್ಯ ಸಿಕ್ಕಿದ್ದು, ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದರ ಬಗ್ಗೆ ಪುರಾವೆ ಸಿಕ್ಕಿದೆ. ದೇವನಹಳ್ಳಿಯ ಹ್ಯಾಕರ್ ಮನೆ ಮೇಲೆ ಎಸ್‍ಐಟಿ ದಾಳಿ ಮಾಡಿತ್ತು. ವೀಡಿಯೋ ಅಪ್‍ಲೋಡ್, ಕಂಪ್ಯೂಟರ್, ಹಾರ್ಡ್ ಡಿಸ್ಕ್ ನಲ್ಲಿ ಸಾಕ್ಷ್ಯ ಸಿಕ್ಕಿದೆ. ಅಲ್ಲದೆ ಹ್ಯಾಕ್ ಮಾಡಿದ್ದ ವೆಬ್‍ಸೈಟ್, ಕೆಲ ದಾಖಲೆಗಳೂ ಪೊಲೀಸರಿಗೆ ಲಭ್ಯವಾಗಿವೆ.
Advertisement
Advertisement
ಮಾಜಿ ಸಚಿವರ ಸಿಡಿ ತಂದುಕೊಟ್ಟವರಿಗೆ ಲಕ್ಷ ಲಕ್ಷ ರೂಪಾಯಿ ದುಡ್ಡು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಿಡಿ ತೆಗೆದುಕೊಂಡು ಹೋಗಿ ಕೊಟ್ಟ ಐದಾರು ಮಂದಿಗೆ ಲಕ್ಷಗಟ್ಟಲೇ ಹಣ ಸಂದಾಯವಾಗಿದೆ. ಈ ಹಣ ಕೊಟ್ಟಿದ್ದು ಯಾರು? ಆ ಹಣದ ಮೂಲ ಎಲ್ಲಿಯದು ಎಂಬುದನ್ನು ಸಹ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ.