ಶಿವಮೊಗ್ಗ: ಮಾಜಿ ಸಚಿವರು ಪಬ್ಲಿಕ್ ಮುಂದೆ ಬಂದು ಸಿಡಿ ನಕಲಿ ಎಂದು ಹೇಳಿದ್ದರು. ಎಸ್‍ಐಟಿ ತನಿಖೆ ಆರಂಭಿಸಿದ ಮೇಲೆ ದೂರು ದಾಖಲಿಸುತ್ತಾರೆ. ಸಿಡಿ ನಕಲಿ ಎಂದ್ಮೇಲೆ ತನಿಖೆಯ ಅಗತ್ಯವೇನಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ವಿರುದ್ಧ ಹಿಂದಿನಿಂದಲೂ ಷಡ್ಯಂತ್ರಗಳು ನಡೆಯುತ್ತಿದ್ದು, ಸದ್ಯವೂ ನಡೆಯುತ್ತಿವೆ. ಅವರು ತಮ್ಮ ಹೇಳಿಕೆಗಳನ್ನ ಬದಲಿಸುತ್ತಿದ್ದಾರೆ. ಯುವತಿ ಹೇಳಿಕೆಯ ವೀಡಿಯೋ ನೋಡಿಲ್ಲ. ವೀಡಿಯೋಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲ್ಕು ಗೃಹ ಸಚಿವರು ಮತ್ತು ಮಹಿಳಾ ಆಯೋಗವಿದೆ. ನೋಡೋಣ ಯಾರು ಏನು ಮಾಡ್ತಾರೆ ಎಂದರು.
ವೀಡಿಯೋಗೆ ಸಂಬಂಧಿಸಿದಂತೆ ಅವರ ಪಕ್ಷದವರೇ ಭಿನ್ನ ಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಶಾಸಕ ಯತ್ನಾಳ್, ಎಂಎಲ್‍ಸಿ ವಿಶ್ವನಾಥ್ ಹೇಳಿಕೆ ಕುರಿತು ಯಾಕೆ ತನಿಖೆ ನಡೆಸುತ್ತಿಲ್ಲ. ಕೆಲ ಮಂತ್ರಿಗಳು ವೀಡಿಯೋ ಗುಮ್ಮ ಇದೆ ಅಂತ ಬಹಿರಂಗವಾಗಿ ಹೇಳಿಕೊಂಡರು ಸರ್ಕಾರ ತನಿಖೆ ಮುಂದಾಗಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾನು ಯಾರಿಗೂ ಹೆದರುವ ಮಗನಲ್ಲ: ಡಿ.ಕೆ ಶಿವಕುಮಾರ್
ಮಂತ್ರಿಗಳು, ನಾನೇ ಅಲ್ಲ. ನನಗೆ ಗೊತ್ತೇ ಇಲ್ಲ ಅಂತಾ ಹೇಳಿದ್ರು. ಈಗ ಎಲ್ಲವೂ ಹೇಳುತ್ತಿದ್ದಾರೆ. ಅವರೇ ಈ ಬಗ್ಗೆ ಹೇಳುತ್ತಿದ್ದಾರೆ. ಮಾಜಿ ಶಾಸಕ ನಾಗರಾಜ್ ದೂರು ನೀಡಿದರಷ್ಟೇ ಸಾಲದು, ನ್ಯಾಯಾಲಯಕ್ಕೆ ಹೋಗಿ ಅಫಿಡೆವಿಟ್ ಫೈಲ್ ಮಾಡಲು ಹೇಳಿ ಎಂದರು.
ಇನ್ನು ಬೆಂಗಳೂರಿನಲ್ಲಿ ಸಿಡಿ ಯುವತಿ ಹೇಳಿಕೆ ಮತ್ತು ಸಿಡಿ ಹಿಂದೆ ಕಾಂಗ್ರೆಸ್ ನವರಿದ್ದಾರೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಈ ವಿಷಯ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.