ಸಿಡಿ ಗ್ಯಾಂಗ್‍ನ ಕಿಂಗ್‍ಪಿನ್‍ಗಳ ಬಗ್ಗೆ ಬಾಯ್ಬಿಡದ ಯುವತಿ

Public TV
1 Min Read
cd lady 1 1

ಬೆಂಗಳೂರು: ವಿಶೇಷ ತನಿಖಾ ತಂಡದ(ಎಸ್‍ಐಟಿ) ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಸಿಡಿ ಲೇಡಿ ಸಿಡಿ ಗ್ಯಾಂಗ್‍ನ ಕಿಂಗ್ ಪಿನ್‍ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಹೌದು. ಬೆಂಗಳೂರನ್ನು ಸಿಡಿ ಗ್ಯಾಂಗ್ ಸದಸ್ಯರು ಒಟ್ಟಿಗೆ ತೊರೆದ ಬಳಿಕ ಬೇರೆ ಬೇರೆ ರಾಜ್ಯಗಳನ್ನು ಸುತ್ತಿದ್ದರು. ನರೇಶ್ ಗೌಡ ಮತ್ತು ಶ್ರವಣ್ ಜೊತೆ ಯುವತಿಯು ತೆರಳುತ್ತಿದ್ದ ಮಾಹಿತಿ ಎಸ್‍ಐಟಿಗೆ ಸಿಕ್ಕಿತ್ತು.

naresh gowda and shravan

ಎಸ್‍ಐಟಿಗೆ ಖಚಿತ ಮಾಹಿತಿ ಸಿಕ್ಕಿದ್ದರೂ ಪೊಲೀಸರು ಆ ಸ್ಥಳಕ್ಕೆ ತೆರಳಿದಾಗ ಸಿಡಿ ಗ್ಯಾಂಗ್ ಸದಸ್ಯರು ಪರಾರಿಯಾಗುತ್ತಿದ್ದರು. ಯುವತಿ, ಕಿಂಗ್‍ಪಿನ್‍ಗಳ ಮೊಬೈಲ್ ಟವರ್ ಲೋಕೇಷನ್ ಗಳು ಹಲವು ಸಂದರ್ಭದಲ್ಲಿ ಒಂದೇ ಕಡೆ ಇದ್ದ ಹಿನ್ನೆಲೆಯಲ್ಲಿ ಯುವತಿಗೆ ಪೊಲೀಸರು ಪ್ರಶ್ನೆ ಕೇಳಿದ್ದರು.

ವಿಚಾರಣೆ ಸಂದರ್ಭದಲ್ಲಿ ಶ್ರವಣ್, ನರೇಶ್ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ಸೂಚನೆ ನೀಡಿದ್ದಾರೆ.

naresh gowda cd case 3

ಈ ಹಿಂದೆ ವಿಡಿಯೋ ಮೂಲಕ ಮಾತನಾಡಿದ್ದ ನರೇಶ್ ಗೌಡ ಯುವತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಆಕೆಯ ಜೊತೆ ಸಂಪರ್ಕದಲ್ಲಿ ಇದ್ದೆ. ಎಸ್‍ಐಟಿ ವಿಚಾರಣೆಗೆ ಈಗ ಹಾಜರಾದರೆ ನನ್ನನ್ನು ಏನು ಮಾಡುತ್ತಾರೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಕೆಲ ದಿನಗಳ ಬಳಿಕ ನಾನೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *