ಶಿವಮೊಗ್ಗ: ಮಾಜಿ ಸಚಿವರ ಸಿಡಿ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ನಡೆಯುತ್ತಿದ್ದು, ಏನಾಗುತ್ತೋ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ತನಿಖೆ ಸರಿ ದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೆವೆ ಎಂದರು.
ಬಿಜೆಪಿ ಅಧಿಕಾರ ದುರುಪಯೋಗ ಮಾಡಿದೆ. ನಮ್ಮ ಶಾಸಕರ ಮೇಲೆ ಕೇಸು ಹಾಕಿದೆ. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮ್ಯಾಟ್ ಸುಟ್ಟು ಹಾಕಲು ಯತ್ನಿಸಿದರು. ಅದಕ್ಕೆ ಬೇರೆ ಬಣ್ಣ ಕಟ್ಟಿ ಸಮಸ್ಯೆ ಸೃಷ್ಟಿಸಿದರು. ನಮ್ಮ ಮುಖಂಡರ ಮೇಲೂ ದೂರು ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.
ನಾವು ಕೂಡ ಹಿಂದುಗಳೇ, ರಾಮನ ಭಕ್ತರೇ. ಶಿವಕುಮಾರ ಅಂದರೆ ಶಿವನ ಪುತ್ರ ಎಂದರ್ಥ. ಸಿದ್ದರಾಮಯ್ಯ ಹೆಸರಲ್ಲೂ ರಾಮನ ಹೆಸರಿದೆ. ನಾವೆಲ್ಲಾ ರಾಮನ ಮಕ್ಕಳೇ. ರಾಮ ಕೇವಲ ಅವರದ್ದು ಮಾತ್ರನಾ….? ರಾಜ್ಯದೆಲ್ಲೆಡೆ ಕಾರ್ಯಕರ್ತರ ಮೇಲೆ ಕಿರುಕುಳ ನೀಡಲು ಬಿಜೆಪಿ ಯತ್ನಿಸಿದೆ. ಎಲ್ಲೆಡೆ ಕೇಸು ದಾಖಲಿಸುತ್ತೇವೆ ಎಂದು ಗರಂ ಆದರು. ಇದೇ ವೇಳೆ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರ ಮಾತು ನಂಬಂಗಿಲ್ಲ. ನೂರು ಸುಳ್ಳು ಹೇಳಬೇಕು ಅಂತಾ ಈಶ್ವರಪ್ಪ ಹೇಳಿದ್ದರು ಎಂದರು.