ಬೆಳಗಾವಿ: ಸಿಡಿ ಕೇಸ್‍ಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ತಪ್ಪಿತಸ್ಥರು ಎನ್ನುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಹೇಳುತ್ತಿಲ್ಲ. ನಾನು ಏನೂ ಅಂತ ಹೇಳಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.
Advertisement
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಕೇಸ್‍ನಲ್ಲಿ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಅನ್ನುವ ಬಗ್ಗೆ ಸಿದ್ದರಾಮಯ್ಯನವರೇ ಏನೂ ಹೇಳುತ್ತಿಲ್ಲ. ಹೀಗಿರುವಾಗ ನಾನು ಏನಂತ ಹೇಳಲಿ. ಸಿಡಿ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
Advertisement
ಕಾಂಗ್ರೆಸ್‍ನಲ್ಲಿ ಸದಾ ಎರಡು ಬಣಗಳಿವೆ. ಒಂದು ಸಿದ್ದರಾಮಯ್ಯ ಬಣ, ಮತ್ತೊಂದು ಡಿ.ಕೆ.ಶಿವಕುಮಾರ್ ಬಣ. ಮೈಸೂರು ಮೇಯರ್ ಚುನಾವಣೆಯಲ್ಲಿ ಅದು ಬಹಿರಂಗವಾಗಿ, ಬೆತ್ತಲಾಗಿದೆ. ಈಗ ಉಪಚುನಾವಣೆ ವೇಳೆ ಒಂದಾಗಿದ್ದೇವೆ ಎಂದು ತೇಪೆ ಹಾಕುತ್ತಿದ್ದಾರೆ. ಅವರು ಯಾವ ಕಾರಣಕ್ಕೂ ಒಂದಾಗುವುದಿಲ್ಲ ಎಂದು ಹರಿಹಾಯ್ದರು.
Advertisement
Advertisement
ಬಿಜೆಪಿ ಸಂಸದರು ಕೇಂದ್ರದ ಗುಲಾಮರು ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸೋನಿಯಾ, ರಾಹುಲ್ ಗಾಂಧಿ ಗುಲಾಮರಾಗಿ ಆ ಪದ ತಲೆಯಲ್ಲಿ ಉಳಿದುಕೊಂಡಿದೆ. ಗುಲಾಮಗಿರಿ ಕಾಂಗ್ರೆಸ್ ನವರಿಗೆ ಮಾತ್ರ ಸೀಮಿತ, ಬಿಜೆಪಿ ಅಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು.