ಬೆಂಗಳೂರು: ಸಿಡಿ ಪ್ರಕರಣದ ತನಿಖೆ ಆರಂಭಗೊಂಡಿದ್ದು ವಿಶೇಷ ತನಿಖಾ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.
ಆರಂಭದಲ್ಲಿ ಯಶವಂತಪುರದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಬಳಿಕ ಆತನ ಸ್ನೇಹಿತೆಯನ್ನು ವಶಕ್ಕೆ ಪಡೆದಿದೆ. ಈ ವ್ಯಕ್ತಿಗೆ ಯುವತಿ ಜೊತೆ ಉತ್ತಮ ಸಂಬಂಧವಿದ್ದು ಈತನೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಸಿಡಿ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ.
Advertisement
ನನ್ನ ಹೆಸರನ್ನು ಕೆಡಿಸಲೆಂದೇ ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ನಾನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರ ಅಪಾರ್ಟ್‌ಮೆಂಟ್ ಮತ್ತು ಹುಳಿಮಾವಿನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ರಮೇಶ್ ಕುಮಾರ್ ಆರೋಪಿಸಿದ್ದರು.