ಹಾಸನ: ಪಕ್ಷ ರಾಜ್ಯದಲ್ಲಿ ಈಗಾಗಲೇ ನೆರೆಹಾವಳಿ ಬಂದಿದ್ದು ಲ್ಯಾಂಡ್ ಸ್ಲೈಡ್ ಗಳಾಗುತ್ತಿದ್ದು, ಈ ನಡುವೆ ಸಿಎಂ ಬದಲಾವಣೆ ವಿಚಾರದಲ್ಲಿ ನನ್ನ ಹೆಸರು ತರುವ ಮೂಲಕ ರಾಜಕೀಯವಾಗಿ ಸ್ಲೈಡಿಂಗ್ ಹೋಗಲ್ಲ ಎಂದು ಕಂದಾಯ ಸಚಿವ ಆರ್ .ಅಶೋಕ್ ನುಡಿದರು.
ಸಕಲೇಶಪುರಕ್ಕೆ ಅತಿವೃಷ್ಟಿ ಸಂಬಂಧ ಪರಿಶೀಲನೆಗೆ ಪ್ರವಾಸಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ರೇಸ್ ನಲ್ಲಿ ನನ್ನ ಹೆಸರು ಪ್ರಸ್ತಾಪವಾಗುತ್ತಿದೆ. ಆದರೆ ಆ ರೇಸ್ ನಲ್ಲಿ ನಾನು ಇಲ್ಲ, ರಾಜ್ಯದಲ್ಲಿ ಪ್ರವಾಹ ಎದುರಾಗಿದೆ. ಮೊದಲು ಜನಗಳಿಗೆ ಕೆಲಸ ಮಾಡೋಣ. ಸದ್ಯಕ್ಕೆ ಯಡಿಯೂರಪ್ಪ ಅವರು ಸಿಎಂ ಅಗಿ ಮುಂದುವರಿಯುತ್ತಾರೆ ಮುಂದೆ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಯಡಿಯೂರಪ್ಪ ಅವರನ್ನೇ ಮುಂದುವರಿಸುವಂತೆ ಸ್ವಾಮೀಜಿಗಳು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ವಿಚಾರವಾಗಿ ಯಡಿಯೂರಪ್ಪ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.
Advertisement
Advertisement
ನಮ್ಮದು ರಾಷ್ಟ್ರೀಯ ಪಕ್ಷ ನಾಲ್ಕು ಗೋಡೆ ಮಧ್ಯ ತೀರ್ಮಾನ ಮಾಡುತ್ತಾರೆ ಅದರಂತೆ ಅಮಿತ್ ಶಾ ಹಾಗೂ ಮೋದಿ ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದು, ಅವರ ತೀರ್ಮಾನದಂತೆ ರಾಜ್ಯದಲ್ಲಿ ಸಿಎಂ ಬದಲಾವಣೆ ನಡೆಯಲಿದೆ. ಸ್ವಾಮೀಜಿಗಳ ಬಗ್ಗೆ ಗೌರವವಿದೆ ಆದರೆ ಪಕ್ಷದ ಆಂತರಿಕ ವಿಚಾರ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಹಾಗೂ ಸ್ವಾಮೀಜಿಗಳ ಸಲಹೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕೇಂದ್ರದಲ್ಲಿ ಪಕ್ಷ ಏನು ತೀರ್ಮಾನ ಮಾಡುತ್ತಾರೆ ನಾವು ಅದರಂತೆ ನಡೆಯುತ್ತೇವೆ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಹೈಕಮಾಂಡ್ ಯಾವ ಕೆಲಸ ಕೊಡುತ್ತದೆ ಅದನ್ನು ಮಾಡಲು ಸಿದ್ಧ ಎಂದು ಅಶೋಕ್ ಸ್ಪಷ್ಟಪಡಿಸಿದರು.
Advertisement
Advertisement
ನಿರಂತರ ಕರೆ:
ಕಂದಾಯ ಸಚಿವ ಆರ್. ಅಶೋಕ್ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಸಕಲೇಶಪುರದ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಿಂದ ಪದೇಪದೇ ಫೋನ್ ಕರೆಗಳು ಬರುತ್ತಿದ್ದವು. ಈಗಾಗಲೇ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿತ್ತು. ಫೋನ್ ಕರೆಗಳಿಂದ ಹಲವು ಅನುಮಾನಕ್ಕೆ ಕಾರಣವಾಯಿತು.
ರಸ್ತೆ ಕುಸಿದಿರುವ ಜಾಗದಲ್ಲಿ ಹೆಚ್ಚಿನ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. ಸಂಚಾರಕ್ಕೆ ಪರ್ಯಾಯ ಮಾರ್ಗ ನಿಗದಿಪಡಿಸಲಾಗಿದ್ದು, ಶೀಘ್ರವೇ ರಸ್ತೆ ದುರಸ್ತಿ ಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಯಿತು.(2/2) pic.twitter.com/gZCPJ56tJE
— R. Ashoka (ಆರ್. ಅಶೋಕ) (@RAshokaBJP) July 24, 2021
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಏನು ಮಾತಾಡಬೇಕು ಏನು ಮಾತನಾಡಬಾರದು ಎಂಬ ಬಗ್ಗೆ ಸೂಚನೆಗಳು ಅಥವಾ ಇತರೆ ಮಾಹಿತಿಗಳ ಬಗ್ಗೆ ಏನು ಹೇಳಬೇಕು ಎಂದು ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರೇನೊ ಎಂಬ ಗುಸುಗುಸು ಕೇಳಿಬಂತು.
ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಡಿಸಿ ಖಾತೆಯಲ್ಲಿ 950 ಕೋಟಿ ಮೀಸಲು: ಸಚಿವ ಆರ್.ಅಶೋಕ್https://t.co/W61E60Y8oe#KarnatakaFlood #KarnatakaRains #MonsoonRains #KannadaNews #Karnataka #Rain #RAshok #Flood @RAshokaBJP @CMofKarnataka
— PublicTV (@publictvnews) July 24, 2021
ಕೇಂದ್ರದ ನಿರ್ಧಾರಕ್ಕೆ ಬದ್ಧ ಅಂದ್ರು ಗೋಪಾಲಯ್ಯ:
ಕೇಂದ್ರದಲ್ಲಿ ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ಮುಂಬೈ ಬ್ರದರ್ಸ್ ಎಲ್ಲ ಬಿಜೆಪಿಯ ಸದಸ್ಯರು ಪಕ್ಷದ ಕಾರ್ಯಕರ್ತರು. ಪಕ್ಷದ ನಿರ್ದೇಶನದಂತೆ ಯಾವ ಕೆಲಸ ಕೊಡುತ್ತದೆ ಅದರಂತೆ ನಡೆಯುತ್ತೇವೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ. ನಾವು ಆ ಮನೆಗೆ ಹೋಗಿದ್ದೇವೆ. ಪಕ್ಷ ಎಲ್ಲ ಸ್ಥಾನಮಾನ ನೀಡಿದೆ ಅದನ್ನು ಮಾಡಿಕೊಂಡು ಹೋಗುತ್ತೇವೆ. ನಮಗೆ ಪಕ್ಷದ ಮೇಲೆ ವರಿಷ್ಠರ ಮೇಲೆ ಸಂಪೂರ್ಣ ನಂಬಿಕೆಯಿದೆ. ಆತ್ಮಸಾಕ್ಷಿಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ನಾವು ಬಿಜೆಪಿ ಸದಸ್ಯರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಿಲುವನ್ನು ಗೋಪಾಲಯ್ಯ ಸ್ಪಷ್ಟಪಡಿಸಿದರು.